ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೇಶ್ಕ ಪ್ರಕೃತಿ ಪರೀಕ್ಷಣಾ ಅಭಿಯಾನ್ ಕಾರ್ಯಕ್ರಮವು ಆಂತರಿಕ ಗುಣಮಟ್ಟ ಭರವಸ ಕೋಶ, ಯುವ ರೆಡ್ ಕ್ರಾಸ್ ಘಟಕ ಮತ್ತು ರೋವರ್ಸ್- ರೇಂಜರ್ಸ್ ಘಟಕ ಹಾಗೂ ಪ್ರಸನ್ನ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆ ಇವರ ಸಹಯೋಗದೊಂದಿಗೆ ಡಿ.23 ರಂದು ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರ ವಾತ, ಪಿತ್ತ, ಕಫ ಇವುಗಳ ಪರೀಕ್ಷೆ ಮಾಡಿ, ಅದಕ್ಕೆ ಪೂರಕವಾಗಿ ಸೇವಿಸಬೇಕಾದ ಆಹಾರ ವ್ಯವಸ್ಥೆಯ ಬಗ್ಗೆ ಅಲ್ಲಿನ ವೈದ್ಯ ವೃಂದ ಸವಿವರವಾಗಿ ತಿಳಿಸಿದರು. ವೈದ್ಯರಾದ ಡಾ. ದೇವಾನಂದ್ ಅಭಿಯಾನದ ಮಹತ್ವ ಹಾಗೂ ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದರ ಬಗ್ಗೆ ಸವಿವರವಾಗಿ ತಿಳಿಸಿದರು.
ಡಾ. ವಿಷ್ಣು ಹಾಗೂ ಡಾ. ವೀಣಾ ರವರು ತಮ್ಮ ವೈದ್ಯ ವಿದ್ಯಾರ್ಥಿಗಳ ಜೊತೆಗೆ ಎಲ್ಲರ ಆರೋಗ್ಯ ತಪಾಸಣೆಯನ್ನು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊಫೆಸರ್ ಪದ್ಮನಾಭ ಕೆ. ಇವರು ವಹಿಸಿದರು.
ವೇದಿಕೆಯಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಡಾ. ರವಿ ಎಂ. ಎನ್. ಹಾಗೂ ಪ್ರೊಫೆಸರ್ ನವೀನ್ ಉಪಸ್ಥಿತರಿದ್ದರು. ದ್ವಿತೀಯ ಎಂಕಾಂನ ಕುಮಾರಿ ಅನನ್ಯ ಜೈನ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.