ಕಲ್ಮಂಜ: ಫುಡ್ ಫಾರ್ ಹಂಗ್ರಿ ಟ್ರಸ್ಟ್ ಬೆಂಗಳೂರು ವತಿಯಿಂದ ಕಲ್ಮಂಜ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಡಾ| ಹರ್ಷರವರು ಮನಸ್ಸಿನ ಏಕಾಗ್ರತೆಗಾಗಿ ಮತ್ತು ಮೆದುಳಿನ ಸಾಮರ್ಥ್ಯ ಹೆಚ್ಚಿಸಲು ಸೂಪರ್ ಬ್ರೈನ್ ಯೋಗ ಹಾಗೂ ಧ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕ ವಿತರಿಸಿದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ ಸಾವಿತ್ರಿ ಸಿ.ಡಿ ಯವರು ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ವಸಂತಿ ಎಂˌಹೇಮಲತಾˌ ಮಾಲಿನಿ ಹೆಗಡೆˌ ಪ್ರೇಮಲತಾ ˌಸವಿತಾˌ ಪ್ರೇಮಾ ಯಚ್ ವಿ ಹಾಗೂ ಸುಧೀಂದ್ರ ಸಹಕರಿಸಿದರು.