ಕುಕ್ಕೇಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿಯಲ್ಲಿ ಶಾಲಾ ವಾರ್ಷಿಕೋತ್ಸವದ 70ರ ಸಂಭ್ರಮವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣಪ್ಪ ಉಜ್ಜಲ್ ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ವಸಂತ ಪೇರ್ಡೆ ಉದ್ಘಾಟಿಸಿದರು. ನಂತರ ಅಂಗನವಾಡಿ ವಿದ್ಯಾರ್ಥಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು .ಶಾಲಾ ಮಾಜಿ ಎಸ್.ಡಿ.ಎಂ.ಸಿ ಸದಸ್ಯರಿಗೆ ಗೌರವಾರ್ಪಣೆ, ಶಾಲಾ ಹಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕುಮಾರಿ ಚೈತನ್ಯ ಅವರನ್ನು ಅಭಿನಂದಿಸಲಾಯಿತು. ಹಾಗೂ ಶಾಲಾ ವಾರ್ಷಿಕೋತ್ಸವದ ಪ್ರಯೋಜಕರಾದ ದಿನೇಶ್ ಬಾಳಿಗಾ ಪುಂಜಾಲಕಟ್ಟೆ, ಜಾರಪ್ಪ ಪೂಜಾರಿ ಬುಳೆಕ್ಕಾರ ಪಾದೆ, ಸುಧೀರ್ ಎಸ್ ಶ್ರಾವಣಿ ಎಂಟರ್ಪ್ರೈಸಸ್ ಪುಂಜಾಲಕಟ್ಟೆ, ಇವರನ್ನು ಸನ್ಮಾನಿಸಲಾಯಿತು.
ಸಭಾಕಾರ್ಯಕ್ರಮವು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಿತಾ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಜೆಯ ಕಾರ್ಯಕ್ರಮ ದಲ್ಲಿ ಶಾಲಾ ವಿದ್ಯಾರ್ಥಿಗಳಿಂದ , ಹಳೆ ವಿದ್ಯಾರ್ಥಿಗಳಿಂದ,ಹಾಗೂ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ವಿದ್ಯಾರ್ಥಿಗಳಿಂದ ಪೌರಣಿಕ ನಾಟಕ ಸತ್ಯವಾನ್ ಸಾವಿತ್ರಿ ಹಾಗೂ ಶಾಲೆಯ ಸ್ವರ್ಗ ನಾಟಕ ಪ್ರದರ್ಶನ ನಡೆಯಿತು. ಸ್ಥಳೀಯರು ಮತ್ತು ಹಳೆ ವಿದ್ಯಾರ್ಥಿಗಳಿಂದ ನಿಧಿಶ್ ಕುಮಾರ್ ಶೆಟ್ಟಿ ರಚನೆ ಮತ್ತು ನಿರ್ದೇಶನಾದ ಜೋಕ್ಲಾಟಿಕೆ ಬುಡ್ಲೆ ಎನ್ನುವ ಸುಂದರ ನಗೆ ನಾಟಕ ಪ್ರದರ್ಶನಗೊಂಡಿತು.