ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕುಕ್ಕೇಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

ಕುಕ್ಕೇಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೇಡಿಯಲ್ಲಿ ಶಾಲಾ ವಾರ್ಷಿಕೋತ್ಸವದ 70ರ ಸಂಭ್ರಮವು ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣಪ್ಪ ಉಜ್ಜಲ್ ನೆರವೇರಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ವಸಂತ ಪೇರ್ಡೆ ಉದ್ಘಾಟಿಸಿದರು. ನಂತರ ಅಂಗನವಾಡಿ ವಿದ್ಯಾರ್ಥಿಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು .ಶಾಲಾ ಮಾಜಿ ಎಸ್‌.ಡಿ.ಎಂ.ಸಿ ಸದಸ್ಯರಿಗೆ ಗೌರವಾರ್ಪಣೆ, ಶಾಲಾ‌ ಹಳೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕುಮಾರಿ ಚೈತನ್ಯ ಅವರನ್ನು ಅಭಿನಂದಿಸಲಾಯಿತು. ಹಾಗೂ ಶಾಲಾ ವಾರ್ಷಿಕೋತ್ಸವದ ಪ್ರಯೋಜಕರಾದ ದಿನೇಶ್ ಬಾಳಿಗಾ ಪುಂಜಾಲಕಟ್ಟೆ, ಜಾರಪ್ಪ ಪೂಜಾರಿ ಬುಳೆಕ್ಕಾರ ಪಾದೆ, ಸುಧೀರ್ ಎಸ್ ಶ್ರಾವಣಿ ಎಂಟರ್ಪ್ರೈಸಸ್ ಪುಂಜಾಲಕಟ್ಟೆ, ಇವರನ್ನು ಸನ್ಮಾನಿಸಲಾಯಿತು.

ಸಭಾಕಾರ್ಯಕ್ರಮವು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಿತಾ.ಕೆ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಜೆಯ ಕಾರ್ಯಕ್ರಮ ದಲ್ಲಿ ಶಾಲಾ ವಿದ್ಯಾರ್ಥಿಗಳಿಂದ , ಹಳೆ ವಿದ್ಯಾರ್ಥಿಗಳಿಂದ,ಹಾಗೂ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ವಿದ್ಯಾರ್ಥಿಗಳಿಂದ ಪೌರಣಿಕ ನಾಟಕ ಸತ್ಯವಾನ್ ಸಾವಿತ್ರಿ ಹಾಗೂ ಶಾಲೆಯ ಸ್ವರ್ಗ ನಾಟಕ ಪ್ರದರ್ಶನ ನಡೆಯಿತು. ಸ್ಥಳೀಯರು ಮತ್ತು ಹಳೆ ವಿದ್ಯಾರ್ಥಿಗಳಿಂದ ನಿಧಿಶ್ ಕುಮಾರ್ ಶೆಟ್ಟಿ ರಚನೆ ಮತ್ತು ನಿರ್ದೇಶನಾದ ಜೋಕ್ಲಾಟಿಕೆ ಬುಡ್ಲೆ ಎನ್ನುವ ಸುಂದರ ನಗೆ ನಾಟಕ ಪ್ರದರ್ಶನಗೊಂಡಿತು.

Related posts

ಗುರುವಾಯನಕೆರೆ: ನಿಲ್ಲಿಸಿದ್ದ ಮೋಟಾರ್‌ ಸೈಕಲ್‌ ಕಳವು

Suddi Udaya

ಉಜಿರೆ: ಎಸ್.ಡಿ.ಎಂ. ಐ.ಟಿ. ಗ್ರಂಥಪಾಲಕರಿಗಾಗಿ ಒಂದು ದಿನದ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಅಲೆಕ್ಕಿ-ಮುಗೇರಡ್ಕ ಮೊಗ್ರು ಶ್ರೀರಾಮ ಮಂದಿರದ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗಣಪತಿ ಹವನ, ಆಶ್ಲೇಷ ಪೂಜೆ, ಅನುಜ್ಞಾಕಲಶ ದುರ್ಗಾ ಪೂಜೆ

Suddi Udaya

ನೆರಿಯ: ಶ್ರೀ ಕ್ಷೇತ್ರ ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!