September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರುವಾಯನಕೆರೆ ದ .ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ

ಬೆಳ್ತಂಗಡಿ: ಫಾದರ್ ಎಲ್. ಎಮ್ ಪಿಂಟೊ ಆಸ್ಪತ್ರೆ, ಬದ್ಯಾರ್ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಅಭಿವೃದ್ಧಿ ಸಮಿತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಮತ್ತು ಗ್ರಾಮ ಪಂಚಾಯಿತಿ ಕುವೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರ ಫೆ.15 ರಂದು ಗುರುವಾಯನಕೆರೆ ದ .ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಖ್ಯಾತ ಶಸ್ತ್ರ ಚಿಕಿತ್ಸಾ ಹಾಗೂ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ. ಎಲ್ ರೋಯ್ ಸಲ್ಡಾನ್ಹಾ ಕ್ಯಾನ್ಸರ್ ಚಿಕಿತ್ಸಾ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಔಷಧ ವಿಭಾಗದ ಡಾ| ಪ್ರಕಾಶ್ ಶೆಣೈ, ಮೂಳೆ ಶಸ್ತ್ರ ಚಿಕಿತ್ಸಾಕ ಡಾ| ವಿಲ್ಬರ್ ಕುಟಿನ್ಹೊ, ಪ್ರಸೂತಿ ಸ್ತ್ರೀರೋಗ ತಜ್ಞೆ ಡಾ. ಜೆಸ್ಸಿ ಮರಿಯಾ ಡಿಸೋಜ, ಮಕ್ಕಳ ತಜ್ಞ ಡಾ| ಬಾಲಕೃಷ್ಣ, ಚರ್ಮರೋಗ ತಜ್ಞ ಡಾ| ನಾಗಭೂಷಣ್ ಹೆಗ್ಡೆ ಉಪಸ್ಥಿತರಿದ್ದರು.

ಶಿಬಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಉಚಿತ ಗರ್ಭಕಂಠದ ಕ್ಯಾನ್ಸರ್ ಪರೀಕ್ಷೆ, ಉಚಿತ ಇ.ಸಿ.ಜಿ. . ಉಚಿತ ಕ್ಯಾನ್ಸರ್ ತಪಾಸಣೆ, ಉಚಿತ ಔಷಧಿ 50% ರಿಯಾಯಿತಿಯಲ್ಲಿ ರಕ್ತಪರೀಕ್ಷೆ ಮಾಡಲಾಯಿತು. ಈ ವೇಳೆ ಉಚಿತ ಹೆಲ್ತ್ ಕಾರ್ಡ್ ನೀಡಲಾಯಿತು. 125 ಕ್ಕೂ ಹೆಚ್ಚಿನ ಜನರು ಶಿಬಿರದ ಸದುಪಯೋಗವನ್ನು ಪಡೆದುಕೊಂಡು. 25 ಮಂದಿ ಗೆ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.

Related posts

ಇಳಂತಿಲ ಗ್ರಾಮದ ಕಟ್ಟೆಚಾರು ನಿವಾಸಿ ಕುಶಾಲಪ್ಪ ಗೌಡ ನಿಧನ

Suddi Udaya

ಮೇ 31 : ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ನಿವೃತ್ತಿ

Suddi Udaya

ಆಮಂತ್ರಣ ಪರಿವಾರದ ರಾಯಭಾರಿ ವಿಜಯ ಕುಮಾರ್ ಜೈನ್ ಅಳದಂಗಡಿ ರವರಿಗೆ ಪುತ್ತೂರು ಪ್ರತಿಭಾ ಸಾಂಸ್ಕೃತಿಕ ಉತ್ಸವದಲ್ಲಿ ಸನ್ಮಾನ

Suddi Udaya

ಅಂಡಿಂಜೆಯಲ್ಲಿ ಭಟ್ಸ್ ಮೆಡಿಕಲ್ ಶುಭಾರಂಭ

Suddi Udaya

ನಿಡ್ಲೆ: ಸತ್ಯಭಾಮೆಯಮ್ಮ ನಿಧನ

Suddi Udaya

ಕಳೆಂಜ: ಮಳೆ ನೀರಿನಿಂದ ಹರಡುವ ರೋಗಗಳ ಬಗ್ಗೆ ಮಾಹಿತಿ

Suddi Udaya
error: Content is protected !!