ಬೆಳ್ತಂಗಡಿ : ಬೆಳ್ತಂಗಡಿ ವರ್ತಕರ ಸಂಘದಿಂದ ಈ ವರ್ಷದ ಕ್ರಿಸ್ಮಸ್ ಆಚರಣೆಯನ್ನು ದಯಾ ವಿಶೇಷ ಶಾಲೆಯಲ್ಲಿ ವಿಷೇಶ ಮಕ್ಕಳೊಂದಿಗೆ ಆಚರಣೆ ಮಾಡಲಾಯಿತು.
ಹಬ್ಬದ ಪ್ರಯುಕ್ತ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ವರ್ತಕರ ಸಂಘದಿಂದ ಚೆಕ್ಕನ್ನು ದಯಾ ವಿಶೇಷ ಶಾಲೆಯ ಸಂಚಾಲಕರಾದ ಫಾ| ವಿನೋದ್ ಮಸ್ಕೇರೇನಸ್ ರಿಗೆ ಹಸ್ತಾಂತರಿಸಲಾಯಿತು ಹಾಗೂ ಒಂದು ದಿನದ ಊಟದ ಖರ್ಚನ್ನು ಕೊಡಲಾಯಿತು.
ಸಂಘದ ಅಧ್ಯಕ್ಷರು ರೋನಾಲ್ಡ್ ಲೋಬೊ ಹಾಗೂಫಾ| ವಿನೋದ್ ಮಸ್ಕೇರೇನಸ್ ಕ್ರಿಸ್ಮಸ್ ಸಂದೇಶವನ್ನು ನೀಡಿದರು. ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ ಧನ್ಯವಾದವಿತ್ತರು. ವೇದಿಕೆಯಲ್ಲಿ ಉಪಾಧ್ಯಕ್ಷ ಶಶಿಧರ್ ಪೈ, ಪುಷ್ಪರಾಜ್ ಶೆಟ್ಟಿ, ಅಲ್ಪೊನ್ಸ್ ಫ್ರಾಂಕೋ, ರಾಜೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಸೆಲಿನ್ ನೋರೋನ್ಹ ಹಾಗೂ ದಿನೇಶ್ ಗೌಡ ಉಪಸ್ಥಿತರಿದ್ದರು.