ಹೊಸಂಗಡಿ: ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ. ಕರಿಂಜೆ, ಗ್ರಾಮ ಪಂಚಾಯತ್ ಹೊಸಂಗಡಿ, ಶ್ರೀ ಜಗದ್ಗುರು ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಕರಿಂಜೆ ಶ್ರೀಕೃಷ್ಣ ಗೆಳೆಯರ ಬಳಗ ಮಾರೂರು ಹೊಸಂಗಡಿ, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ, ಇವರ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ರಕ್ತನಿಧಿ ಕೇಂದ್ರ ಮಂಗಳೂರು ಇವರ ಸಹಕಾರದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಡಿ. 22 ರಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಕರಿಂಜೆಯ ಸಂಸ್ಥಾಪಕ ಶ್ರೀಶ್ರೀಶ್ರೀ ಮುಕ್ತಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶಿರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಆರ್ ಹೆಗ್ಡೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ., ಅಧ್ಯಕ್ಷ ಸುಧಾಕರ ನೂಯಿ ಮತ್ತು ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ ಎಸ್.ಎಲ್ , ವೆನ್ಸಾಕ್ ಆಸ್ಪತ್ರೆಯ ಡಾ.ಅಂತೋನಿ, ಡಾ.ಫಾತಿಮ, ಪಂಚಾಯತ್ ಪಿಡಿಓ ಗಣೇಶ್ ಶೆಟ್ಟಿ, ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯ ಸಿಇಓ ಶ್ರೀಮತಿ ಶಶಿಕಲಾ ಉಪಸ್ಥಿತರಿದ್ದರು.
ಡಾ. ಅಂತೋನಿಯವರು “ರಕ್ತದಾನ ಶ್ರೇಷ್ಠ ದಾನ ಅದನ್ನು ಯುವಕರು 3 ತಿಂಗಳಿಗೊಮ್ಮೆ ರಕ್ತ ನೀಡಿದರೆ ಯುವತಿಯರು 4 ತಿಂಗಳಿಗೊಮ್ಮೆ ರಕ್ತ ನೀಡಬಹುದು ಹಾಗೆಯೇ ಮಧುಮೇಹ ಇದ್ದವರು ರಕ್ತವನ್ನು ನೀಡಬಹುದು.ಇನ್ಸುಲಿನ್ ತೆಗೊಳ್ಳುವವರು ರಕ್ತ ನೀಡಲಾಗುವುದಿಲ್ಲ ಎಂದು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಕೇಂದ್ರಬಿಂಧುವಾದ ದಾನಿಗಳು ಒಟ್ಟಾಗಿ 55 ಮಂದಿ ರಕ್ತವನ್ನು ನೀಡಿ ಸಹಕರಿಸಿದ್ದಾರೆ.
ಗ್ರಾಮ ಪಂಚಾಯತಿನ ಪಿಡಿಓ ಗಣೇಶ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ., ಅಧ್ಯಕ್ಷ ಸುಧಾಕರ ನೂಯಿ ಸ್ವಾಗತಿಸಿ, ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘ ಸಿಇಓ ಶ್ರೀಮತಿ ಶಶಿಕಲಾ ವಂದಿಸಿದರು.