20.1 C
ಪುತ್ತೂರು, ಬೆಳ್ತಂಗಡಿ
December 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ “ ದೀಕ್ಷಾ ಸಂಸ್ಕಾರ” ಸಮಾರಂಭ

ಉಜಿರೆ : ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸೇವೆಯ ಮನೋಭಾವನೆ ಉತ್ಕಟವಾಗಿದ್ದು ಆರಂಭದಲ್ಲಿ ಎಂತಹ ವ್ಯಕ್ತಿತ್ವ ಇದ್ದರೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ಜೀವನಕ್ಕೆ ಅಡಿ ಇಟ್ಟ ನಂತರ ಅವರ ಜೀವನ ಉತ್ತಮ ನಡುವಳಿಕೆಯತ್ತ ಪರಿವರ್ತನೆ ಆಗುತ್ತದೆ ಅಂತಹ ಶಿಸ್ತನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಸುತ್ತದೆ ಎಂದು ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ.ರಾಜೇಶ ಬಿ ಹೇಳಿದರು.

ಅವರು ಎಸ್. ಡಿ. ಎಮ್. ಪದವಿ ಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ನೀಡುವ “ ದೀಕ್ಷಾ ಸಮಾರಂಭದಲ್ಲಿ” ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಯಾವಾಗಲೂ ಶಿಸ್ತು ಬದ್ಧರಾಗಿದ್ದು ಅವರು ಇತರೆ ವಿದ್ಯಾರ್ಥಿಗಳಿಗೆ ಪ್ರೇರಕರಾಗಿರಬೇಕು, ನಿಮ್ಮಲ್ಲಿ ದೇಶಪ್ರೇಮ, ಪರೋಪಕಾರ ಹಾಗೂ ಸೇವಾ ಮನೋಭಾವ ಯಾವತ್ತೂ ಇತರರಿಗೆ ಮಾದರಿಯಾಗಿರುತ್ತದೆ. ಯಾವಾಗ ನೀವು ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿರೋ ಅವಾಗ ನಿಮ್ಮ ವ್ಯಕ್ತಿತ್ವ ಪರಿಪೂರ್ಣವಾಗಿ ಪರಿಪಕ್ವಗೊಳ್ಳುತ್ತದೆ ಆದ್ದರಿಂದ ನಿಮ್ಮ ಸಕ್ರಿಯ ತೊಡಗಿಸಿಕೊಳ್ಳುವಿಕೆ ಬಹಳ ಮಹತ್ವ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಶುಭ ಹಾರೈಸಿದರು.

ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಯುನಿಟ್‌ ಲೀಡರ್ಗಳಾದ ಲಕ್ಷ್ಮಿಶ್ ಭಟ್ ಮತ್ತು ಶ್ರೀಮತಿ ಅಂಕಿತಾ ಎಮ್ ಕೆ ಇವರ ಮಾರ್ಗದರ್ಶನ ಮತ್ತು ತರಬೇತಿಯಲ್ಲಿ ವಿದ್ಯಾರ್ಥಿಗಳು ರೋವರ್ಸ್ ರೇಂಜರ್ಸ್ ದೀಕ್ಷೆ ಯನ್ನು ತೆಗೆದುಕೊಂಡು ಪ್ರತೀಜ್ಞಾ ವಿಧಿ ಗೈದರು.

Related posts

ಮಡಂತ್ಯಾರು: ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನಜಾಗೃತಿ ಬೀದಿ ನಾಟಕ ಕಾರ್ಯಕ್ರಮ

Suddi Udaya

ನಾರಾವಿ ಶ್ರೀ ಕೃಷ್ಣ ಹೋಟೆಲ್ ನ ಮಾಲಕ ಚಂದ್ರಕಾಂತ ಹೆಗ್ಡೆ ನಿಧನ

Suddi Udaya

ಧರ್ಮಸ್ಥಳ: ಆಟೋ ಚಾಲಕ ಸುಂದರ ಗೌಡ ನಿಧನ

Suddi Udaya

ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಅಭಿಯಾನ

Suddi Udaya

ದೈಹಿಕ ಶಿಕ್ಷಕ ಜೋನ್ ಕೆ ಪಿ ಸೇವಾ ನಿವೃತ್ತಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೀಳ್ಕೊಡುಗೆ ಸನ್ಮಾನ

Suddi Udaya

ಜ.22: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ: ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!