24.6 C
ಪುತ್ತೂರು, ಬೆಳ್ತಂಗಡಿ
May 18, 2025
ಬೆಳ್ತಂಗಡಿವರದಿ

ಎಸ್ ಡಿ ಎಂ ಬೆಳ್ತಂಗಡಿ ಆಂಗ್ಲ ಮಾಧ್ಯಮ ಶಾಲೆಗೆ ಸಿ ಡಬ್ಲ್ಯೂ ಬಿ ವಿದ್ಯಾರ್ಥಿಗಳ ತಂಡ ಭೇಟಿ

ಬೆಳ್ತಂಗಡಿ,: ಇಲ್ಲಿನ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗೆ ಜಪಾನ್ ಮೂಲದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ವೇದಿಕೆ ಸಿ.ಡಬ್ಲ್ಯೂ.ಬಿ. (Community Work beyond Borders) ವತಿಯಿಂದ ಕಾಂಬೋಡಿಯಾ ಹಾಗೂ ಜಪಾನ್ ದೇಶದ ವಿದ್ಯಾರ್ಥಿಗಳನ್ನು ಒಳಗೊಂಡ ತಂಡವು ಡಿ. 24 ರಂದು  ಭೇಟಿ ನೀಡಿತು.

 ಎಸ್ ಡಿ ಎಂ ಕಲಾ ಕೇಂದ್ರ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಾಲೆಯ ವಿವಿಧ ಚಟುವಟಿಕೆಗಳನ್ನು ತಂಡಕ್ಕೆ ಸಂಕ್ಷಿಪ್ತವಾಗಿ ಪರಿಚಯಿಸಲಾಯಿತು.

ಶಾಲೆಯ ವಿದ್ಯಾರ್ಥಿಗಳು  ಪ್ರಾರ್ಥನಾ ನೃತ್ಯ ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಕಾಂಬೋಡಿಯಾ ಹಾಗೂ ಜಪಾನ್ ವಿದ್ಯಾರ್ಥಿಗಳೊಂದಿಗೆ ಶಾಲೆಯ ವಿದ್ಯಾರ್ಥಿಗಳು ಸಂವಾದ ನಡೆಸಿದರು.

ಇದೆ ಸಂದರ್ಭದಲ್ಲಿ ಕಾಂಬೋಡಿಯಾ ಹಾಗೂ ಜಪಾನ್ ವಿದ್ಯಾರ್ಥಿಗಳು ಕಾಂಬೋಡಿಯಾದ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು.

ಸಿ.ಡಬ್ಲ್ಯೂ.ಬಿ. ಇದರ ಭಾರತೀಯ ಸದಸ್ಯೆ ಮನೋರಮಾ ಅತಿಥಿಗಳನ್ನು ಪರಿಚಯಿಸಿದರು

ಶಿಕ್ಷಕಿ ಕಸ್ತೂರಿ ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು

Related posts

ಮಚ್ಚಿನ: ಕುದ್ರಡ್ಕ ನಿವಾಸಿ ಅಣ್ಣಿ ಪೂಜಾರಿ ನಿಧನ

Suddi Udaya

ಪೆರಾಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿ ರಚನೆ: ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ ಆಯ್ಕೆ

Suddi Udaya

ಶಿರ್ಲಾಲು ಆಟೋ ಚಾಲಕ ಮಾಲಕ ಸಂಘದ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ನಿಧನ

Suddi Udaya

ಮಾ.21-24: ಶಿಶಿಲ ಶ್ರೀ ಗಡಿ ಚಾಮುಂಡಿ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಬೆಳ್ತಂಗಡಿ :ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ದಾಸ್ತಾನು ಲಭ್ಯ

Suddi Udaya
error: Content is protected !!