ಬೆಳಾಲು : ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಮತ್ತು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಇವರು ಕೊಡುಗೆಯಾಗಿ ದಿವಂಗತ ದಿನೇಶ್ ಪೂಜಾರಿ ಉಪ್ಪಾರು ಇವರ ಸ್ಮರಣಾರ್ಥವಾಗಿ ದೇವಸ್ಥಾನದ ವಠಾರದಲ್ಲಿ ನಿರ್ಮಾಣ ಮಾಡಿದ ಅನಂತೋಡಿ ವೃತ್ತ ವನ್ನು ಡಿ 23 ರಂದು ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ, ಬೆಳಾಲು ಇವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ, ಬೆಳಾಲು ಇದರ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಇಲಾಖಾ ಗುತ್ತಿಗೆ ಇಂಜಿನಿಯರ್ ಹರೀಶ್ ಕಾರಿಂಜ, ದೇವಸ್ಥಾನದ ಆಸ್ರಣ್ಣರಾದ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುನ್ನಾಯ, ಮಹಿಳಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಹೇಮಲತಾ ಶ್ರೀನಿವಾಸ್ ಗೌಡ, ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಬಾಯ್ತರಡ್ಡ ಉಪಸ್ಥಿತರಿದ್ದರು.
ಗಿರೀಶ್ ಎಂ ಕಾರ್ಯಕ್ರಮ ನಿರೂಪಣೆಯೊಂದಿಗೆ ಸ್ವಾಗತಿಸಿದರು. ಸತೀಶ್ ಗೌಡ ಎಳ್ಳುಗದ್ದೆ ವಂದಿಸಿದರು.