20.1 C
ಪುತ್ತೂರು, ಬೆಳ್ತಂಗಡಿ
December 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ

ಬೆಳ್ತಂಗಡಿ ತಾಲೂಕಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ಕಾರ್ಯಕ್ರಮವನ್ನು ಡಿ.23 ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.

ವೀರಭದ್ರಪ್ಪ ಎ.ಡಿ.ಸ.ಕೃ.ನಿ., ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ , ರೈತರು ಇತ್ತೀಚೆಗೆ ತಮ್ಮ ಹೊಲದಲ್ಲಿ ಇಳುವರಿ ಕುಂಠಿತವಾಗುವುದನ್ನು ಕಾನೂತ್ತಿದ್ದು, ಸುಸ್ಥಿರ ಇಳುವರಿಗೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಹಾಗೂ ಪ್ರಗತಿಪರ ಕೃಷಿಕರಾದ ಬಿ.ಕೆ ದೇವರಾವ್ ರವರು ಮಾತನಾಡಿ ಭತ್ತ ಕೃಷಿ ಮಾಡುವ ರೈತ ಎಂದೂ ಕೆಳಗೆ ಬೀಳುವುದಿಲ್ಲ. ಉತ್ತಮ ಆರೋಗ್ಯಕ್ಕೆ ತಮ್ಮದೇ ಹೊಲದಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಭತ್ತ, ತರಕಾರಿ ಹಾಗೂ ಗೆಡ್ಡೆ ಗೆಣಸುಗಳು ಸೇವನೆ ಮಾಡಬೇಕು. ಇದರಿಂದ ಆರೋಗ್ಯವು ಸುಸ್ಥಿತಿಯಲ್ಲಿ ಇರುತ್ತದೆ. ಸಾವಯವ ಕೃಷಿಯಿಂದ ಮಣ್ಣಿನ ಆರೋಗ್ಯವು ಉತ್ತಮ ರೀತಿಯಲ್ಲಿರುತ್ತದೆ ಎಂದರು.

ಬೆಳ್ತಂಗಡಿ ಕೃಷಿಕ ಸಮಾಜ ನಿಕಟಪೂರ್ವ ಅಧ್ಯಕ್ಷ ಮಹಾವೀರ ಜೈನ್, ಮಾತನಾಡಿ ಕೃಷಿಕ ಸಮಾಜದ ಕಾರ್ಯಚಟುವಟಿಕೆಗಳು ಅದರ ಬೆಳವಣಿಗೆ ಹಾಗೂ ಅವರು ಮಾಡಿರುವ ಕೆಲಸಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಾ.ಕೃ.ಸ ನಿಕಟಪೂರ್ವ ಕಾರ್ಯದರ್ಶಿ ಮುನಿರಾಜ ಅಜ್ರಿ ಅವರು ಮಾತನಾಡಿ ರೈತರು ಆದಾಯ ತೆರಿಗೆ ನೀಡದೆ ಸ್ವತಂತ್ರ ರಾಗಿ ಆದಾಯ ಗಳಿಸಬಹುದಾಗಿದೆ. ಎಲ್ಲಾ ರೈತರು ತಮಗಿರುವ ಅಲ್ಪ ಜಮೀನಿನಲ್ಲಾದರು ಕೃಷಿ ಮಾಡಿದರೆ ಅದರಲ್ಲಿ ಬರುವ ಆದಾಯವನ್ನು ಹಾಗೂ ಫಲವಸ್ತುಗಳನ್ನು ನಾವು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬಹುದೆಂದು ತಿಳಿಸಿದರು.

ಕೃಷಿಕ ಸಮಾಜ ನಿಕಟಪೂರ್ವ ಖಜಾಂಚಿ ದಿನೇಶ್ ಗೌಡ ಮಾತನಾಡಿ ಭತ್ತ ಬೆಳೆಯುವ ರೈತರಿಗೆ ಸರ್ಕಾರವು ಇನ್ನಷ್ಟು ಸವಲತ್ತುಗಳನ್ನು ತೋಟಗಾರಿಕಾ ಬೆಳೆಗಳಿಗೆ ನೀಡುತ್ತಿದೆಯೋ ಅದೇ ರೀತಿ ನರೇಗಾ ಯೋಜನೆಯಡಿ ನೀಡಬೇಕು. ಯಂತ್ರಧಾರೆ ಕೇಂದ್ರಗಳು ಇನ್ನಷ್ಟು ಸಂಪನ್ಮೂಲ ಭರಿತವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಬಿ.ಕೆ ದೇವರಾವ್, ಕೃಷಿಕ ಸಮಾಜ ನಿಕಟಪೂರ್ವಾಧ್ಯಕ್ಷ ಮಹಾವೀರ ಜೈನ್, ಬಿಜೋತ್ಪಾದನಾ ಕೇಂದ್ರ ಗುತ್ತಿಗೆ ಕೃಷಿ ಕಾರ್ಮಿಕ ಗುರುವಪ್ಪ ಇವರನ್ನು ಸನ್ಮಾನಿಸಲಾಯಿತು.

ಕೃಷಿ ಅಧಿಕಾರಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಇಲಾಖಾ ಸಿಬ್ಬಂದಿಗಳು ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾ.ಪಂ. ಗಳ ಕೃಷಿ ಸಖಿಯರು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.

Related posts

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಚರ್ಚೆ ಹಾಗೂ ವಿಶೇಷ ಮಾಹಿತಿ ಶಿಬಿರ

Suddi Udaya

ಧರ್ಮಸ್ಥಳ: ಮಹಿಳಾ ಆರೋಗ್ಯ ಮತ್ತು ನ್ಯಾಚುರೋಪತಿ ಉದ್ಘಾಟನೆ

Suddi Udaya

ಪುಂಜಾಲಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಶೇ. 93.91 ಫಲಿತಾಂಶ

Suddi Udaya

ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ನಾರಾವಿ ವಲಯದ ಸಾವ್ಯಾ -ಕೊಕ್ರಾಡಿ ಕಾರ್ಯಕ್ಷೇತ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಕರಾಟೆ ಪಟುಗಳ ಹಳದಿ ಬೆಲ್ಟ್ ಪರೀಕ್ಷೆ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿ.ಬಿ.ಎಸ್.ಇ ಶಾಲೆಯ 35 ವಿದ್ಯಾರ್ಥಿಗಳು ತೇರ್ಗಡೆ

Suddi Udaya

ಎ.23: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್‌ ಕ್ಲಬ್‌ನಲ್ಲಿ 15ನೇ ವರ್ಷದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya
error: Content is protected !!