ಬೆಳ್ತಂಗಡಿ: ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನ್ಯಾಯವಾದಿ ಮುರುಳಿ ಬಲಿಪರವರ ಕಛೇರಿಯು ಡಿ.24 ರಂದು ಸ್ಥಳಾಂತರಗೊಂಡು ವಿಘ್ನೇಶ್ ಸಿಟಿ ಸಂಕೀರ್ಣದ ಹಳೆ ನೋಂದಾಣಾಧಿಕಾರಿಗಳ ಕಛೇರಿ, ಬೆಳ್ತಂಗಡಿಯಲ್ಲಿ ಶುಭಾರಂಭಗೊಂಡಿತ್ತು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಕೆ. ಸುಬ್ರಹ್ಮಣ್ಯ ಭಟ್, ಸಿ.ಎಮ್.ಎಫ್. ಆರ್.ಐ ನಿವೃತ್ತ ಅಧಿಕಾರಿ ಶ್ರೀಮತಿ ಉಮಾ ಎಸ್. ಭಟ್ ಕಛೇರಿ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರು, ಹಿರಿಯ ವಕೀಲರಾದ ಪ್ರತಾಪ್‌ಸಿಂಹ ನಾಯಕ್ ಭಾಗವಹಿಸಿದರು. ನ್ಯಾಯವಾದಿಗಳು ಮತ್ತು ನೋಟರಿ ಪಬ್ಲಿಕ್ ಮುರಳಿ ಬಲಿಪ ಬಂದಂತ ಅತಿಥಿ ಗಣ್ಯರನ್ನು ಸತ್ಕರಿಸಿ ವಂದಿಸಿದರು .ಆಶ್ರಫ್ ಅಲಿಕುಂಞಿ ಸ್ವಾಗತಿಸಿದರು.