25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳಾಲು: ದಿ| ದಿನೇಶ್ ಪೂಜಾರಿ ಉಪ್ಪಾರು ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಅನಂತೋಡಿ ವೃತ್ತ ಲೋಕಾರ್ಪಣೆ

ಬೆಳಾಲು : ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಮತ್ತು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಇವರು ಕೊಡುಗೆಯಾಗಿ ದಿವಂಗತ ದಿನೇಶ್ ಪೂಜಾರಿ ಉಪ್ಪಾರು ಇವರ ಸ್ಮರಣಾರ್ಥವಾಗಿ ದೇವಸ್ಥಾನದ ವಠಾರದಲ್ಲಿ ನಿರ್ಮಾಣ ಮಾಡಿದ ಅನಂತೋಡಿ ವೃತ್ತ ವನ್ನು ಡಿ 23 ರಂದು ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ, ಬೆಳಾಲು ಇವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಚಾಮುಂಡೇಶ್ವರಿ ಕ್ಷೇತ್ರ, ಆರಿಕೋಡಿ, ಬೆಳಾಲು ಇದರ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಲೋಕಾರ್ಪಣೆಗೊಳಿಸಿದರು.

ವೇದಿಕೆಯಲ್ಲಿ ಬೆಳ್ತಂಗಡಿ ಇಲಾಖಾ ಗುತ್ತಿಗೆ ಇಂಜಿನಿಯರ್ ಹರೀಶ್ ಕಾರಿಂಜ, ದೇವಸ್ಥಾನದ ಆಸ್ರಣ್ಣರಾದ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುನ್ನಾಯ, ಮಹಿಳಾ ಸಮಿತಿಯ ಗೌರವಾಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಹೇಮಲತಾ ಶ್ರೀನಿವಾಸ್ ಗೌಡ, ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಬಾಯ್ತರಡ್ಡ ಉಪಸ್ಥಿತರಿದ್ದರು.

ಗಿರೀಶ್ ಎಂ ಕಾರ್ಯಕ್ರಮ ನಿರೂಪಣೆಯೊಂದಿಗೆ ಸ್ವಾಗತಿಸಿದರು. ಸತೀಶ್ ಗೌಡ ಎಳ್ಳುಗದ್ದೆ ವಂದಿಸಿದರು.

Related posts

ತುಂಗಪ್ಪ ಬಂಗೇರ ನೇತೃತ್ವದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ 17 ನೇ ವರ್ಷದ ಸಾಮೂಹಿಕ ವಿವಾಹ: ಸತಿ ಪತಿಗಳಾಗಿ 7 ಜೋಡಿ ಗೃಹಾಸ್ಥಶ್ರಮಕ್ಕೆ,ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯಪ್ರಶಸ್ತಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ

Suddi Udaya

ಬಳಂಜ ಗ್ರಾ.ಪಂ. ನ ಅಭಿವೃದ್ಧಿ ಕೆಲಸ ಕಾರ್ಯಗಳಿಗೊಳಿದ ಪ್ರತಿಷ್ಠಿತ `ಗಾಂಧಿ ಗ್ರಾಮ’ ಪುರಸ್ಕಾರ

Suddi Udaya

ಮಾ16: ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವ , ವಂದೇ ಮಾತರಂ, ನನ್ನ ಸೇವೆ ದೇಶಕ್ಕಾಗಿ ಧ್ಯೇಯದೊಂದಿಗೆ ನೇತ್ರಾವತಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋ. ಬಿಸಿ ಟ್ರಸ್ಟ್ ನಿಂದ ಸ್ವ ಉದ್ಯೋಗ ಪ್ರೇರಣಾ ಶಿಬಿರ

Suddi Udaya

ಕಡಿರುದ್ಯಾವರದಲ್ಲಿ ಗ್ರಾಮ ಒನ್ ನಾಗರಿಕ‌ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಉಜಿರೆ: ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್ ವಶಕ್ಕೆ

Suddi Udaya
error: Content is protected !!