ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ

ಬೆಳ್ತಂಗಡಿ ತಾಲೂಕಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ಕಾರ್ಯಕ್ರಮವನ್ನು ಡಿ.23 ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.

ವೀರಭದ್ರಪ್ಪ ಎ.ಡಿ.ಸ.ಕೃ.ನಿ., ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ , ರೈತರು ಇತ್ತೀಚೆಗೆ ತಮ್ಮ ಹೊಲದಲ್ಲಿ ಇಳುವರಿ ಕುಂಠಿತವಾಗುವುದನ್ನು ಕಾನೂತ್ತಿದ್ದು, ಸುಸ್ಥಿರ ಇಳುವರಿಗೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಕೇಂದ್ರ ಬಿಂದು ಹಾಗೂ ಪ್ರಗತಿಪರ ಕೃಷಿಕರಾದ ಬಿ.ಕೆ ದೇವರಾವ್ ರವರು ಮಾತನಾಡಿ ಭತ್ತ ಕೃಷಿ ಮಾಡುವ ರೈತ ಎಂದೂ ಕೆಳಗೆ ಬೀಳುವುದಿಲ್ಲ. ಉತ್ತಮ ಆರೋಗ್ಯಕ್ಕೆ ತಮ್ಮದೇ ಹೊಲದಲ್ಲಿ ಸಾವಯವ ರೀತಿಯಲ್ಲಿ ಬೆಳೆದ ಭತ್ತ, ತರಕಾರಿ ಹಾಗೂ ಗೆಡ್ಡೆ ಗೆಣಸುಗಳು ಸೇವನೆ ಮಾಡಬೇಕು. ಇದರಿಂದ ಆರೋಗ್ಯವು ಸುಸ್ಥಿತಿಯಲ್ಲಿ ಇರುತ್ತದೆ. ಸಾವಯವ ಕೃಷಿಯಿಂದ ಮಣ್ಣಿನ ಆರೋಗ್ಯವು ಉತ್ತಮ ರೀತಿಯಲ್ಲಿರುತ್ತದೆ ಎಂದರು.

ಬೆಳ್ತಂಗಡಿ ಕೃಷಿಕ ಸಮಾಜ ನಿಕಟಪೂರ್ವ ಅಧ್ಯಕ್ಷ ಮಹಾವೀರ ಜೈನ್, ಮಾತನಾಡಿ ಕೃಷಿಕ ಸಮಾಜದ ಕಾರ್ಯಚಟುವಟಿಕೆಗಳು ಅದರ ಬೆಳವಣಿಗೆ ಹಾಗೂ ಅವರು ಮಾಡಿರುವ ಕೆಲಸಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಾ.ಕೃ.ಸ ನಿಕಟಪೂರ್ವ ಕಾರ್ಯದರ್ಶಿ ಮುನಿರಾಜ ಅಜ್ರಿ ಅವರು ಮಾತನಾಡಿ ರೈತರು ಆದಾಯ ತೆರಿಗೆ ನೀಡದೆ ಸ್ವತಂತ್ರ ರಾಗಿ ಆದಾಯ ಗಳಿಸಬಹುದಾಗಿದೆ. ಎಲ್ಲಾ ರೈತರು ತಮಗಿರುವ ಅಲ್ಪ ಜಮೀನಿನಲ್ಲಾದರು ಕೃಷಿ ಮಾಡಿದರೆ ಅದರಲ್ಲಿ ಬರುವ ಆದಾಯವನ್ನು ಹಾಗೂ ಫಲವಸ್ತುಗಳನ್ನು ನಾವು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಬಹುದೆಂದು ತಿಳಿಸಿದರು.

ಕೃಷಿಕ ಸಮಾಜ ನಿಕಟಪೂರ್ವ ಖಜಾಂಚಿ ದಿನೇಶ್ ಗೌಡ ಮಾತನಾಡಿ ಭತ್ತ ಬೆಳೆಯುವ ರೈತರಿಗೆ ಸರ್ಕಾರವು ಇನ್ನಷ್ಟು ಸವಲತ್ತುಗಳನ್ನು ತೋಟಗಾರಿಕಾ ಬೆಳೆಗಳಿಗೆ ನೀಡುತ್ತಿದೆಯೋ ಅದೇ ರೀತಿ ನರೇಗಾ ಯೋಜನೆಯಡಿ ನೀಡಬೇಕು. ಯಂತ್ರಧಾರೆ ಕೇಂದ್ರಗಳು ಇನ್ನಷ್ಟು ಸಂಪನ್ಮೂಲ ಭರಿತವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಬಿ.ಕೆ ದೇವರಾವ್, ಕೃಷಿಕ ಸಮಾಜ ನಿಕಟಪೂರ್ವಾಧ್ಯಕ್ಷ ಮಹಾವೀರ ಜೈನ್, ಬಿಜೋತ್ಪಾದನಾ ಕೇಂದ್ರ ಗುತ್ತಿಗೆ ಕೃಷಿ ಕಾರ್ಮಿಕ ಗುರುವಪ್ಪ ಇವರನ್ನು ಸನ್ಮಾನಿಸಲಾಯಿತು.

ಕೃಷಿ ಅಧಿಕಾರಿ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಇಲಾಖಾ ಸಿಬ್ಬಂದಿಗಳು ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾ.ಪಂ. ಗಳ ಕೃಷಿ ಸಖಿಯರು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.

Related posts

ಕುಂಭಶ್ರೀ ಆಂ.ಮಾ. ಶಾಲೆಯ ಒಂದನೇ ತರಗತಿ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ವೇಣೂರಿನ ಅಂಚೆಕಛೇರಿ, ಪೊಲೀಸ್ ಠಾಣೆ ಮತ್ತು ಮಾರ್ಕೆಟ್ ಗೆ ಭೇಟಿ

Suddi Udaya

ರಾಜ್ಯಮಟ್ಟದ ಸಿಸರ್ ಕಪ್ 2025 ಕ್ರಿಕೆಟ್ ಪಂದ್ಯಾಟ : ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ತಂಡ ಪ್ರಥಮ

Suddi Udaya

ಮರೋಡಿಯ ವಸಂತ ಕುಮಾರ್ ಹಾರೋದ್ದು ರವರಿಂದ ದೇಹ ದಾನಕ್ಕೆ ನೋಂದಣಿ

Suddi Udaya

ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ: ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್

Suddi Udaya

ರಾಜ್ಯಮಟ್ಟದ ಕ್ರೀಡಾಕೂಟ: ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಪೂಜಾರಿ ಮರೋಡಿ ರವರಿಗೆ ಚಿನ್ನ ಹಾಗೂ ಬೆಳ್ಳಿಯ ಪದಕ

Suddi Udaya

ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪುರಿಗೆ ಗೌರವಾರ್ಪಣೆ

Suddi Udaya
error: Content is protected !!