ಬೆಳ್ತಂಗಡಿ: ಗುರುವಾಯನಕೆರೆ ಉಪಕೇಂದ್ರದಿಂದ ಕಕ್ಕಿಂಜೆ 33/11ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ 33ಕೆವಿ ಕಕ್ಕಿಂಜೆ ಹಾಗೂ 33ಕೆವಿ ಪಿಲಿಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ ಡಿ. 26ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ ಎಂದು ಉಜಿರೆ ಮೆಸ್ಕಾಂ ಉಪ ವಿಭಾಗದ ಪ್ರಕಟಣೆ ತಿಳಿಸಿದೆ.
ಈ ಸಮಯ 33 ಕೆವಿ ಪೆಟ್ರೋನೆಟ್ ಸ್ಥಾವರ, 33 ಕೆವಿ ಎಚ್ ಪಿಸಿಎಲ್ ಸ್ಥಾವರ ತೋಟತ್ತಾಡಿ, ಚಿಬಿದ್ರೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮುಂಡಾಜೆ, ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಗೊಳ್ಳಲಿದೆ.