22.7 C
ಪುತ್ತೂರು, ಬೆಳ್ತಂಗಡಿ
December 27, 2024
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

ಮುಂಡಾಜೆ: ವಿದ್ಯುತ್ ಲೈನ್ ನ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಗುಡ್ಡಕ್ಕೆ ಬೆಂಕಿ ಬಿದ್ದ ಪ್ರಕರಣ ಮುಂಡಾಜೆಯ ಕಡಂಬಳ್ಳಿ ಎಂಬಲ್ಲಿ ಡಿ.24 ರಂದು ನಡೆದಿದೆ. ಮರ ವಿದ್ಯುತ್ ಲೈನ್ ಮತ್ತು ರಸ್ತೆ ಮೇಲೆ ಉರುಳಿ ಬಿದ್ದಾಗ ಎರಡು ಎಲ್ ಟಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಈ ವೇಳೆ ಬೆಂಕಿ ಉತ್ಪತ್ತಿಯಾಗಿ ಸುಮಾರು ಒಂದು ಎಕರೆಯಷ್ಟು ಗುಡ್ಡ ಪ್ರದೇಶ ಸುಟ್ಟು ಹೋಗಿದೆ.

ಗುಡ್ಡದ ಸಮೀಪದಲ್ಲಿ ರಬ್ಬರ್ ತೋಟವಿದ್ದು ಅಲ್ಲಿಗೆ ಬೆಂಕಿ ಪಸರಿಸದಂತೆ ಸ್ಥಳೀಯರು ಸಹಕರಿಸಿದರು. ರಬ್ಬರ್ ತೋಟಕ್ಕೆ ಬೆಂಕಿ ಪಸರಿಸುತ್ತಿದ್ದರೆ ಹೆಚ್ಚಿನ ನಷ್ಟ ಉಂಟಾಗುತ್ತಿತ್ತು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಮೆಸ್ಕಾಂ ನವರು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮಕಲಶೋತ್ಸವ: ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಸಿಯೋನ್ ಆಶ್ರಮ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

Suddi Udaya

ಮುಗೇರಡ್ಕ ಮೊಗ್ರು ಯುವ ವೇದಿಕೆ ವತಿಯಿಂದ ವಿದ್ಯಾನಿಧಿಗೆ ದೇಣಿಗೆ ಹಸ್ತಾಂತರ

Suddi Udaya

ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿದ ಶಿಕ್ಷಕನ ವಿರುದ್ದ ದೂರು ದಾಖಲು

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿಗೆ ಎಕ್ಸ್‌ಪೆರಿಯಾ-2023 ಪ್ರಶಸ್ತಿ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya
error: Content is protected !!