34.2 C
ಪುತ್ತೂರು, ಬೆಳ್ತಂಗಡಿ
December 26, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ

ಉಜಿರೆ : ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಡಿ. 24ರಂದು ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಸಂಜೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಏಸು ಕ್ರಿಸ್ತರು ಹುಟ್ಟಿದ ಗಾಯನಗಳು ಹಾಡಿ ಏಸು ಕ್ರಿಸ್ತರ ಜನದ ಸಂಭ್ರಮ ಪ್ರಾರಂಭ ವಾಯಿತು.

ದಿವ್ಯ ಬಲಿ ಪೂಜೆ ಮಂಗಳೂರಿನ ಜೆಪ್ಪು ಸೆಮಿನಾರಿಯ ಧರ್ಮ ಗುರು ವಂ. ಫಾ. ಐವನ್ ಡಿಸೋಜಾ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ನಾವೆಲ್ಲರೂ ಸಹೋದರತೆಯಿಂದ ಬಾಳಿ ಪರರಿಗೂ ಪ್ರೀತಿ ವಿಶ್ವಾಸ ದಿಂದ ನೆಲೆಸಬೇಕು. ನಾವು ನೀಡಿದ ಧಾನ ಧರ್ಮ ಗುಪ್ತವಾಗಿರಬೇಕೇ ಹೊರತು ಹತ್ತಾರು ಜನರಿಗೆ ಪ್ರಚಾರ ಪಡಿಸುವದಲ್ಲ ಮತ್ತು ಸಹಾಯ ಮಾಡಿದವರಿಂದ ಯಾರು ಪ್ರತಿಫಲ ನಿರೀಕ್ಸಿಸಬಾರದು ಆವಾಗ ಮಾತ್ರ ಕ್ರಿಸ್ತ ಜನ್ಮ ದಿನ ಆಚರಣೆ ಸಾರ್ಥಕವಾಗುತ್ತದೆ ಎಂದರು. ಚರ್ಚ್ ಪ್ರಧಾನ ಧರ್ಮ ಗುರು ವಂ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ದಿವ್ಯ ಬಲಿ ಪೂಜೆಯಲ್ಲಿ ಭಾಗವಿಸಿದ್ದರು. ಭಕ್ತಾದಿಗಳೆಲ್ಲರೂ ಏಸು ಸ್ವಾಮಿಯ ಮೂರ್ತಿಗೆ ಭಕ್ತಿಯಿಂದ ನಮಿಸಿದರು. ದಾನಿ ಗಳಿಗೆ ಮೇಣದ ಬತ್ತಿ ವಿತರಿಸಲಾಹಿತು. ಐ ಸಿ ವೈ ಎಂ ಸಂಘದಿಂದ ಕೇಕ್ ಡ್ರಾ, ಸಾಂತಾಕ್ಲಾಸ್, ಸುಡು ಮದ್ದು ಪ್ರದರ್ಶನ ನಡೆಯಿತು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸರ್ವ ರೀತಿಯಲ್ಲಿ ಸಹಕರಿಸಿದರು.

Related posts

ಬೆಳ್ತಂಗಡಿ: ಎಂ.ಆರ್ ಡ್ರೆಸ್ಸಸ್ ನಲ್ಲಿ ಕ್ಲಿಯರೆನ್ಸ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ. 30 ರಷ್ಟು ರಿಯಾಯಿತಿ

Suddi Udaya

ಬೆಳ್ತಂಗಡಿ: ಆ.8 ರಂದು ವಿದ್ಯುತ್ ನಿಲುಗಡೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಡುಗೆ ಭಟ್ಟರಾಗಿದ್ದ ಪದ್ಮನಾಭ ಶಬರಾಯ ನಿಧನ

Suddi Udaya

ಬದಿನಡೆ ಪುಂಡಿಕಲ್ ಕುಕ್ಕು ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ,ಧಾರ್ಮಿಕ ಉಪನ್ಯಾಸ

Suddi Udaya

ಬೆಳ್ತಂಗಡಿ ಬಂಟರ ಸಂಘದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಎ.ಸದಾನಂದ ಶೆಟ್ಟಿ ರವರಿಗೆ ಗೌರವಾರ್ಪಣೆ

Suddi Udaya

ಗುರುವಾಯನಕೆರೆ ಶ್ರೀ ಶಾರದಾಂಭ ಭಜನಾ ಮಂಡಳಿ ವತಿಯಿಂದ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ

Suddi Udaya
error: Content is protected !!