ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ

ಉಜಿರೆ : ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಡಿ. 24ರಂದು ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಸಂಜೆ ನಡೆದ ದಿವ್ಯ ಬಲಿ ಪೂಜೆಯಲ್ಲಿ ಏಸು ಕ್ರಿಸ್ತರು ಹುಟ್ಟಿದ ಗಾಯನಗಳು ಹಾಡಿ ಏಸು ಕ್ರಿಸ್ತರ ಜನದ ಸಂಭ್ರಮ ಪ್ರಾರಂಭ ವಾಯಿತು.

ದಿವ್ಯ ಬಲಿ ಪೂಜೆ ಮಂಗಳೂರಿನ ಜೆಪ್ಪು ಸೆಮಿನಾರಿಯ ಧರ್ಮ ಗುರು ವಂ. ಫಾ. ಐವನ್ ಡಿಸೋಜಾ ಪ್ರಧಾನ ದಿವ್ಯ ಬಲಿ ಪೂಜೆ ಅರ್ಪಿಸಿ ಪ್ರವಚನ ನೀಡಿದರು. ನಾವೆಲ್ಲರೂ ಸಹೋದರತೆಯಿಂದ ಬಾಳಿ ಪರರಿಗೂ ಪ್ರೀತಿ ವಿಶ್ವಾಸ ದಿಂದ ನೆಲೆಸಬೇಕು. ನಾವು ನೀಡಿದ ಧಾನ ಧರ್ಮ ಗುಪ್ತವಾಗಿರಬೇಕೇ ಹೊರತು ಹತ್ತಾರು ಜನರಿಗೆ ಪ್ರಚಾರ ಪಡಿಸುವದಲ್ಲ ಮತ್ತು ಸಹಾಯ ಮಾಡಿದವರಿಂದ ಯಾರು ಪ್ರತಿಫಲ ನಿರೀಕ್ಸಿಸಬಾರದು ಆವಾಗ ಮಾತ್ರ ಕ್ರಿಸ್ತ ಜನ್ಮ ದಿನ ಆಚರಣೆ ಸಾರ್ಥಕವಾಗುತ್ತದೆ ಎಂದರು. ಚರ್ಚ್ ಪ್ರಧಾನ ಧರ್ಮ ಗುರು ವಂ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ. ಫಾ. ವಿಜಯ್ ಲೋಬೊ ದಿವ್ಯ ಬಲಿ ಪೂಜೆಯಲ್ಲಿ ಭಾಗವಿಸಿದ್ದರು. ಭಕ್ತಾದಿಗಳೆಲ್ಲರೂ ಏಸು ಸ್ವಾಮಿಯ ಮೂರ್ತಿಗೆ ಭಕ್ತಿಯಿಂದ ನಮಿಸಿದರು. ದಾನಿ ಗಳಿಗೆ ಮೇಣದ ಬತ್ತಿ ವಿತರಿಸಲಾಹಿತು. ಐ ಸಿ ವೈ ಎಂ ಸಂಘದಿಂದ ಕೇಕ್ ಡ್ರಾ, ಸಾಂತಾಕ್ಲಾಸ್, ಸುಡು ಮದ್ದು ಪ್ರದರ್ಶನ ನಡೆಯಿತು.

ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಹಾಗೂ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸರ್ವ ರೀತಿಯಲ್ಲಿ ಸಹಕರಿಸಿದರು.

Related posts

ಅಪ್ರಾಪ್ತ ಬಾಲಕನಿಗೆ ಹಲ್ಲೆ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು- ಪ್ರಕರಣ ದಾಖಲು

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಥೆಗಳಲ್ಲಿ ಜೀವನ ಮೌಲ್ಯ ಉಪನ್ಯಾಸ ಕಾರ್ಯಕ್ರಮ

Suddi Udaya

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಪುಸ್ತಕ- ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ತರಬೇತಿ ಕಾರ್ಯಾಗಾರ – ಶೈಕ್ಷಣಿಕ ಸಾಧ‌ನೆಗೆ ಇಚ್ಚಾಶಕ್ತಿ ಮತ್ತು ಬದ್ದತೆ ಮುಖ್ಯ: ದಾಸಪ್ಪ ಪೂಜಾರಿ

Suddi Udaya

ಕೆ.ಎಸ್ಎಂಸಿ ಎ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಮೇ 18: ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!