24.4 C
ಪುತ್ತೂರು, ಬೆಳ್ತಂಗಡಿ
April 4, 2025
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

ಮುಂಡಾಜೆ: ವಿದ್ಯುತ್ ಲೈನ್ ನ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ, ಗುಡ್ಡಕ್ಕೆ ಬೆಂಕಿ ಬಿದ್ದ ಪ್ರಕರಣ ಮುಂಡಾಜೆಯ ಕಡಂಬಳ್ಳಿ ಎಂಬಲ್ಲಿ ಡಿ.24 ರಂದು ನಡೆದಿದೆ. ಮರ ವಿದ್ಯುತ್ ಲೈನ್ ಮತ್ತು ರಸ್ತೆ ಮೇಲೆ ಉರುಳಿ ಬಿದ್ದಾಗ ಎರಡು ಎಲ್ ಟಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಈ ವೇಳೆ ಬೆಂಕಿ ಉತ್ಪತ್ತಿಯಾಗಿ ಸುಮಾರು ಒಂದು ಎಕರೆಯಷ್ಟು ಗುಡ್ಡ ಪ್ರದೇಶ ಸುಟ್ಟು ಹೋಗಿದೆ.

ಗುಡ್ಡದ ಸಮೀಪದಲ್ಲಿ ರಬ್ಬರ್ ತೋಟವಿದ್ದು ಅಲ್ಲಿಗೆ ಬೆಂಕಿ ಪಸರಿಸದಂತೆ ಸ್ಥಳೀಯರು ಸಹಕರಿಸಿದರು. ರಬ್ಬರ್ ತೋಟಕ್ಕೆ ಬೆಂಕಿ ಪಸರಿಸುತ್ತಿದ್ದರೆ ಹೆಚ್ಚಿನ ನಷ್ಟ ಉಂಟಾಗುತ್ತಿತ್ತು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಮೆಸ್ಕಾಂ ನವರು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಕಾರಣ ಹೆಚ್ಚಿನ ಅಪಾಯ ತಪ್ಪಿದೆ. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Related posts

ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ದೀಪ, ಪ್ರಸಾದ ಸೇರಿ ಎಲ್ಲಾ ಸೇವೆಗಳಿಗೆ ನಂದಿನಿ ತುಪ್ಪ ಕಡ್ಡಾಯ: ಸರಕಾರದಿಂದ ಆದೇಶ

Suddi Udaya

” ಗೃಹಲಕ್ಷ್ಮಿ” ಯೋಜನೆಯ ನೋಂದಾವಣೆ : ರಜಾ ದಿನದಲ್ಲೂ ಕಾರ್ಯನಿರ್ವಹಿಸಿದ ಕಳಿಯ ಗ್ರಾ.ಪಂ.

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಅಬಲೆಯರ ಪುನರ್ವಸತಿ ಕೇಂದ್ರ “ಸೇವಾಶ್ರಮ”ದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಹುಟ್ಟುಹಬ್ಬ ಆಚರಣೆ

Suddi Udaya

ಸರಕಾರಿ/ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿ.ಎ. ತರಗತಿಗಳಲ್ಲಿ ಭಾಗವಹಿಸಲು ಸುವರ್ಣಾವಕಾಶ: ಎಕ್ಸೆಲ್ ಕಾಲೇಜಿನಲ್ಲಿ ಸಿ.ಎ ಫೌಂಡೇಶನ್ ತರಗತಿಗಳು ಪ್ರತಿ ಆದಿತ್ಯವಾರ ನಡೆಯಲಿದೆ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

Suddi Udaya

ಜ.5: ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ವತಿಯಿಂದ 14ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya
error: Content is protected !!