20.5 C
ಪುತ್ತೂರು, ಬೆಳ್ತಂಗಡಿ
December 28, 2024
ಗ್ರಾಮಾಂತರ ಸುದ್ದಿಚಿತ್ರ ವರದಿ

ಸಫರೇ ತಕ್‌ರೀಮ್ ಗೆ ಕಾಜೂರಿನಲ್ಲಿ ಚಾಲನೆ

ಕಾಜೂರು : ದರ್ಸ್ ರಂಗದಲ್ಲಿ ನಾಲ್ಕು ದಶಕ ಪೂರೈಸಿದ ಅಸ್ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ರವರಿಗೆ ಶಿಷ್ಯಂದಿರು ನೀಡುವ ‘ಅತ್ತಕ್‌ರೀಮ್’ ಗೌರವಾರ್ಪಣೆಯ ಪ್ರಚಾರಾರ್ಥ ಮದನೀಯಂ ಅಬ್ದುಲ್ಲತೀಫ್ ಸಖಾಫಿ ಮುನ್ನಡೆಸುವ ‘ಸಫರೇ ತಕ್‌ರೀಮ್’ ಗೆ ಕಾಜೂರು ದರ್ಗಾ ವಠಾರದಲ್ಲಿ ಚಾಲನೆ ನೀಡಲಾಯಿತು.

ಕಾಜೂರು ಮುದರ್ರಿಸ್ ತೌಸೀಫ್ ಸ‌ಅದಿ ಹರೇಕಳ ಝಿಯಾರತ್ ನೇತೃತ್ವ ನೀಡಿದರು. ನಂತರ ಮಾತನಾಡಿದ ಅಬ್ದುಲ್ಲತೀಫ್ ಸಖಾಫಿ, ಹಸನುಲ್ ಅಹ್ದಲ್ ತಂಙಳರವರು ಸೇವಾ ಬದುಕಿಗೆ ಕಾಲಿಟ್ಟದ್ದು ಈ ಕಾಜೂರಿನಿಂದಲೇ. ಆ ಕಾರಣದಿಂದಲೇ ಈ ಯಾತ್ರೆಗೆ ಕಾಜೂರನ್ನೇ ಆಯ್ಕೆ ಮಾಡಲಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ನಿಮ್ಮೆಲ್ಲರ ಸಹಕಾರ ಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರಹ್ಮಾನಿಯಾ ಜುಮಾ ಮಸ್ಜಿದ್ ಹಾಗೂ ದರ್ಗಾ ಶರೀಫ್ ಕಾಜೂರು ಇದರ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಜೆ.ಎಚ್, ಕೋಶಾಧಿಕಾರಿ ಕಮಾಲ್ ರವರ ನೇತೃತ್ವದಲ್ಲಿ ಅಬ್ದುಲ್ಲತೀಫ್ ಸಖಾಫಿಯನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಜೂರು ಆಡಳಿತ ಸಮಿತಿ ಮಾಜಿ ಕೋಶಾಧಿಕಾರಿ ಅಬ್ಬಾಸ್ ಜೆ.ಎಚ್, ಆಡಳಿತ ಮಂಡಳಿ ಸದಸ್ಯರಾದ ಸಿದ್ದೀಕ್ ಕೆ.ಎಚ್, ಎಸ್‌ವೈಎಸ್ ಕಾಜೂರು ಯುನಿಟ್ ಅಧ್ಯಕ್ಷ ಹೈದರಲಿ ಕಾಜೂರು, ಎಸ್ಸೆಸ್ಸೆಎಫ್ ಕಾಜೂರು ಸೆಕ್ಟರ್ ಅಧ್ಯಕ್ಷ ನಿಝಾಮುದ್ದೀನ್ ಜೆ.ಎಚ್, ಎಸ್ಸೆಸ್ಸೆಎಫ್ ಕಾಜೂರು ಯೂನಿಟ್ ಅಧ್ಯಕ್ಷ ಜಬ್ಬಾರ್ ಕಾಜೂರು ಮುಂತಾದವರು ಉಪಸ್ಥಿತರಿದ್ದರು.

Related posts

ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಸಹಪ್ರಯಾಣಿಕನಿಂದ ಲೈಂಗಿಕ ಕಿರುಕುಳ: ಆರೋಪಿ ಬೆಳ್ತಂಗಡಿ ಮೂಲದ ಅಝೀಮ್ ಬಂಧನ

Suddi Udaya

ಶಿರ್ಲಾಲು‌ ಗ್ರಾ.ಪಂ. ವಿಕಲಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಭಾಗವತಿಕೆ ಸ್ಪರ್ಧೆಗೆ ಆಹ್ವಾನ

Suddi Udaya

ಕೊಕ್ಕಡ: ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಉರುವಾಲು: ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ಸುರಕ್ಷತೆಯ ತಂತ್ರಜ್ಞಾನವನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ISO 27001 ಪ್ರಶಸ್ತಿ ಪ್ರದಾನ

Suddi Udaya
error: Content is protected !!