ಬೆಳ್ತಂಗಡಿ: ದಯಾ ಅಭಿಮಾನಿಗಳು, ಹೋಲಿ ರಿಡೀಮರ್ ಚರ್ಚ್, ಬೆಳ್ತಂಗಡಿ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ಘಟಕ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ವಲಯ, ಕಥೋಲಿಕ ಸಭೆ ಬೆಳ್ತಂಗಡಿ ವಲಯ, ಕಥೋಲಿಕ ಸ್ತ್ರೀ ಸಂಘಟನೆ ಬೆಳ್ತಂಗಡಿ ವಲಯ, ಬೆಳ್ತಂಗಡಿ ವಲಯದ ಎಲ್ಲಾ ಚರ್ಚುಗಳು ಹಾಗೂ ಸಮಾನ ಮನಸ್ಕ ಜನರು, ಶಾಲಾ ಕಾಲೇಜುಗಳು ಮುಂತಾದವರ ಸಹಭಾಗಿತ್ವದಲ್ಲಿ ದಯಾ ವಿಶೇಷ ಮಕ್ಕಳ ಜೀವನಾಧಾರಕ್ಕಾಗಿ ಹಾಗೂ ಅವರಿಗೆ ಪುನರ್ವಸತಿಯನ್ನು ಒದಗಿಸುವ ನಿಟ್ಟಿನಲ್ಲಿ ದಯಾ ಫಿಯೆಸ್ತಾ ಎಂಬ ಹಬ್ಬವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಬೆಳ್ತಂಗಡಿ ಚರ್ಚ್ ನ ಪ್ರಧಾನ ಧರ್ಮಗುರು ವಂ.ಫಾ| ವಾಲ್ಟರ್ ಡಿಮೆಲ್ಲೋ ಹೇಳಿದರು.
ಅವರು ಡಿ.26 ರಂದು ಬೆಳ್ತಂಗಡಿ ಸಂತೋಮ್ ಟವರ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದಯಾ ವಿಶೇಷ ಮಕ್ಕಳು ಆರಂಭದಲ್ಲಿ ವಿವಿಧ ಮೂಲಭೂತ ತರಬೇತಿಗಳು, ಸ್ವಚ್ಚತೆ, ಚಿಕಿತ್ಸೆ, ಕೌಶಲ್ಯ ತರಬೇತಿ ಹಾಗೂ ಅಕ್ಷರ ಜ್ಞಾನ ಮುಂತಾದ ಕೌಶಲ್ಯಗಳನ್ನು ಪಡೆದ ನಂತರ ಅವರ ಜೀವನಾಧಾರವನ್ನು ಬೆಂಬಲಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಸಮಾನಮನಸ್ಕ ಸಂಘಟನೆಗಳು ಒಟ್ಟಿಗೆ ಸೇರಿ ಈ ಒಂದು ಮಾನವೀಯ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ. ಅದಕ್ಕಾಗಿ ಆ ದಿನದ ದಯಾ ಫಿಯೆಸ್ತಾದಲ್ಲಿ ವಿವಿಧ ಸ್ಪರ್ಧೆಗಳಾದ ಕ್ರೌವ್ಲಿಂಗ್ ಬೇಬಿ ಸ್ಪರ್ಧೆಗಳು, ದಯಾ ಡಾನ್ಸ್, ಬೇಬಿ ಫ್ಯಾಷನ್ ಶೋ, ಕಲರ್ ಫುಲ್ ಫ್ಯಾಮಿಲಿ ಆಫ್ ಬೆಳ್ತಂಗಡಿ, ಓಪನ್ ಕ್ಯಾಟಗರಿ ಗ್ರೂಪ್ ಡ್ಯಾನ್ಸ್, ಪ್ರಿನ್ಸ್ ಆಂಡ್ ಪ್ರಿನ್ಸೆಸ್ ಶೋ, ಸ್ಪೋಟ್ ಗೇಮ್ಸ್ ಗಳನ್ನು ಆಯೋಜಿಸಲಾಗಿದೆ. ವಿವಿಧ ಸಸ್ಯಾಹಾರಿ ಮತ್ತು ಮಾಂಸಹಾರಿ ತಿಂಡಿ ತಿನಿಸುಗಳು, ವಿವಿಧ ಆಟಗಳು, ಫನ್‌ಫೇರ್ ಆಟಗಳು, ಜಂಪಿಂಗ್ ಕ್ಯಾಸಲ್, ಹಾಸ್ಯ ಪ್ರದರ್ಶನ, ತರ ತರದ ಸಂಗೀತ ಕಾರ್ಯಕ್ರಮಗಳನ್ನೂ ಕೂಡ ಇಲ್ಲಿ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ವಿಮುಕ್ತಿ ನಿರ್ದೇಶಕರಾದ ವಂ. ಫಾ| ವಿನೋದ್ ಮಸ್ಕರೇನ್ಹಸ್ ಅವರು ಮಾತನಾಡಿ ದಯಾ ವಿಶೇಷ ಮಕ್ಕಳಿಗಾಗಿ ನಡೆಯುವ ಈ ಎಲ್ಲಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಟಿಕೆಟ್ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಟಿಕೆಟ್‌ಗಳು ಹೋಲಿ ರಿಡೀಮರ್ ಚರ್ಚ್, ಬೆಳ್ತಂಗಡಿ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ಘಟಕ, ಭಾರತೀಯ ಕಥೋಲಿಕ ಯುವ ಸಂಚಲನೆ, ಬೆಳ್ತಂಗಡಿ ವಲಯ, ಕಥೋಲಿಕ ಸಭೆ ಬೆಳ್ತಂಗಡಿ ವಲಯ, ಕಥೋಲಿಕ ಸ್ತ್ರೀ ಸಂಘಟನೆ ಬೆಳ್ತಂಗಡಿ ವಲಯ, ಬೆಳ್ತಂಗಡಿ ವಲಯದ ಎಲ್ಲಾ ಚರ್ಚುಗಳು ಹಾಗೂ ಶಾಲಾ ಕಾಲೇಜುಗಳ ಆಫೀಸುಗಳಲ್ಲಿ ದೊರೆಯುತ್ತದೆ. ಈ ಕಾರ್ಯಕ್ರಮವು ಡಿ.29 ರಂದು ಬೆಳಗ್ಗೆ 8ಗಂಟೆಗೆ ಬೆಳ್ತಂಗಡಿ ಹೋಲಿ ರೆಡಿಮರ್‍ರ ಚರ್ಚ್ ವಠಾರದಲ್ಲಿ ಉದ್ಘಾಟನೆಗೊಂಡು ರಾತ್ರಿ 10 ಗಂಟೆಯವರೆಗೆ ನಡೆಯುತ್ತದೆ. ಕಾರ್ಯಕ್ರಮದ ಉಧ್ಘಾಟನೆಗೆ ಖ್ಯಾತ ನಿರ್ದೇಶಕರು, ನಾಟಕಕಾರರು ಆಗಿರುವ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ರವರು, ಹೋಲಿ ರಿಡೀಮರ್ ಚರ್ಚ್ ಹಾಗು ಬೆಳ್ತಂಗಡಿ ತಾಲೂಕಿನ ಮಹಾಗುರುಗಳಾದ ವಂ.ಫಾ ವಾಲ್ಟರ್ ಡಿಮೆಲ್ಲೋರವರು, ಕಥೋಲಿಕ್ ಸಭಾ ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷ ಲಿಯೋ, ಕಪುಚಿನ್ ಕರ್ನಾಟಕ ಪ್ರಾಂತ್ಯದ ಉಪಪ್ರಾಂತ್ಯಾಧಿಕಾರಿ ವಂ.ಫಾ.ಪೌಲ್ ಮೆಲ್ವಿನ್ ಡಿಸೋಜಾ, ದಯಾ ವಿಶೇಷ ಶಾಲೆಯ ನಿರ್ದೇಶಕರು ಹಾಗೂ ದಯಾ ಫಿಯೆಸ್ತಾದ ಎಲ್ಲಾ ಸಮಾನ ಮನಸ್ಕ ಸಂಘಟಿತರು ಭಾಗವಹಿಸಲಿರುವರು. ಈ ಕಾರ್ಯಕ್ರಮಕ್ಕೆ ವಿವಿಧ ಮಹನೀಯರು, ಕಲಾಕಾರರು, ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದು, ಈ ಒಂದು ಮಾನವೀಯ ನೆಲೆಯುಳ್ಳ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸಿ ದಯಾ ವಿಶೇಷ ಮಕ್ಕಳ ಬಾಳಿನಲ್ಲಿ ಸಂತೋಷ, ನಗುವನ್ನು ಬೀರುವ ಪ್ರಯತ್ನವನ್ನು ಮಾಡೋಣ . ದಯಾ ವಿಶೇಷ ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.
ಪ್ರತಿಕಾಗೋಷ್ಠಿಯಲ್ಲಿ ಐಸಿವೈಎಸ್ ನ ರೋಶಣಿ ಡಿ’ಸೋಜ ಉಪಸ್ಥಿತರಿದ್ದರು.