30.7 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಜಿರೆಯಲ್ಲಿ ಎರಡು ಕುಟುಂಬಗಳ ನಡುವೆ ಜಾಗದ ಪಾಲಿನ ವಿಷಯದಲ್ಲಿ ಹೊಡೆದಾಟ: ಪರಸ್ಪರ ಆರೋಪಿಸಿ ಪೊಲೀಸರಿಗೆ ದೂರು

ಬಜಿರೆ: ಜಾಗದ ಪಾಲಿನ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ಹೊಡೆದಾಟದಲ್ಲಿ ಎರಡು ಕಡೆಯವರು ಪರಸ್ಪರ ಆರೋಪ ಹೊರಿಸಿ ವೇಣೂರು ಪೊಲೀಸರಿಗೆ ದೂರು ನೀಡಿದ ಘಟನೆ ಡಿ.25ರಂದು ವರದಿಯಾಗಿದೆ.


ಬಜಿರೆ ಗ್ರಾಮದ ಪದ್ಮನಿಲಯ ನಿವಾಸಿ ರತ್ನರಾಜ್ ಪಡಿವಾಳ್ ಅವರು ನೀಡಿರುವ ದೂರಿನಲ್ಲಿ ಡಿ.25 ರಂದು ಮಧ್ಯಾಹ್ನ ತಾನು ಬಜೆರೆ ಗ್ರಾಮದ ಬಾಡಾರು ತೋಟದಲ್ಲಿ ದನಗಳನ್ನು ಮೇಯಿಸುತ್ತಿರುವ ಸಮಯ 4ಮಂದಿ ಅವರು ಅಕ್ರಮವಾಗಿ ತನ್ನನ್ನು ತಡೆದು ನಿಲ್ಲಿಸಿ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವುದಾಗಿ ಆರೋಪಿಸಿದ್ದಾರೆ. ಹಲ್ಲೆಗೆ ಒಳಗಾದ ಅವರು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.


ಇನ್ನೊಂದು ಕುಟುಂಬದ ಸ್ವರಾಜ್ ಜೈನ್ ಅವರು ನೀಡಿರುವ ದೂರಿನಲ್ಲಿ ತಮಗೆ ಜಮೀನಿನ ಪಾಲಿನ ವಿಚಾರದಲ್ಲಿ ತಕರಾರು ಆಗಿ ಮನಸ್ತಾಪವಿದ್ದು, ಡಿ.25 ರಂದು ಮಧ್ಯಾಹ್ನ ತಾನು ತನ್ನ ತಾಯಿ ಹಾಗೂ ಅತ್ತೆಯ ಮಗ ಮತ್ತು ಪತ್ನಿಯೊಂದಿಗೆ ಬೆಂಗಳೂರಿನಿಂದ ತನ್ನ ಮನೆ ಬಜಿರೆ ಗ್ರಾಮದ ಬಾಡಾರು ಬಂದು ಮನೆಯಲ್ಲಿ ಕರೆಂಟ್ ಇಲ್ಲ ಎಂದು ವಿದ್ಯುತ್ ಮೀಟರ್ ಬೋರ್ಡು ಬಳಿ ಪ್ಯೂಸ್ ಹಾಕಲು ಹೋಗುವ ಸಮಯ ರತ್ನರಾಜ ಪಡಿವಾಲ್ ತನಗೆ ಅವಾಚ್ಯ ಶಬ್ದಗಳಿಂದ ಬೈದು ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದು ಕೋಲಿನಿಂದ ಹಲ್ಲೆ ನಡೆಸಿದ್ದು, ಗಲಾಟೆ ಬಿಡಿಸಲು ಹೋದ ತನ್ನ ತಾಯಿಯನ್ನು ದೂಡಿ ಹಾಕಿ, ತನಗೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ವೇಣೂರು ಠಾಣೆಯಲ್ಲಿ ಎರಡು ಕಡೆಯ ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ.

Related posts

ಧರ್ಮಸ್ಥಳ : ಅಪರಿಚಿತ ವ್ಯಕ್ತಿ ಸಾವು : ವಾರೀಸುದಾರರು ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಬಂದಾರು ಶ್ರೀ ರಾಮ ನಗರ ಜೈ ಶ್ರೀ ರಾಮ್ ಗೆಳೆಯರ ಬಳಗದಿಂದ ಸಾಮೂಹಿಕ ದೀಪಾವಳಿ ಆಚರಣೆ

Suddi Udaya

ಬಳಂಜ ಅಭಿಮಾನಿ ಬಳಗದಿಂದ ಮಾಜಿ ಶಾಸಕ ವಸಂತ ಬಂಗೇರರಿಗೆ ಸಾರ್ವಜನಿಕ ನುಡಿನಮನ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಯಲ್ಲಿ‌ ಅದೃಷ್ಟಶಾಲಿಗೆ ಒಳಿಯಿತು ಪ್ರಿಡ್ಜ್

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದಿಂದ ಗೃಹಲಕ್ಷ್ಮಿಯೋಜನೆ ಸಮಸ್ಯೆ ಪರಿಹರಿಸಲು ಗ್ರಾಮವಾರು ಸಂಚಾಲಕರ ನೇಮಕ

Suddi Udaya

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ನ ಸುವರ್ಣ ಸೇವಾ ಸಂಭ್ರಮ

Suddi Udaya
error: Content is protected !!