ತೆಂಕಕಾರಂದೂರು: ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ, ಎಸ್.ಕೆ.ಎಸ್.ಎಸ್.ಎಫ್ ಪೆರಾಲ್ದರ ಕಟ್ಟೆ ಶಾಖೆ ಹಾಗೂ ಬದ್ರಿಯಾ ಯಂಗ್’ಮೆನ್ಸ್ ಪೆರಾಲ್ದರಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಪ್ರಸ್ತುತ ಮುಸ್ಲಿಮ್ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿ ನೆಲೆ ನಿಂತಿರುವ ಮಾದಕ ವ್ಯಸನ ಮತ್ತು ಮದುವೆ ಅನಾಚಾರದ ವಿರುದ್ದ ಜಾಗೃತಿ ಸಭೆ ಡಿ.27 ರಂದು ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ವಠಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಸಂಶುದ್ದೀನ್ ದಾರಿಮಿ ಪೆರಾಲ್ದರಕಟ್ಟೆ ರವರು ನೆರವೇರಿಸಲಿದ್ದು ಬಹು ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಖತೀಬರು ಕೇಂದ್ರ ಜುಮಾ ಮಸೀದಿ ಕಕ್ಕಿಂಜೆ ರವರು ಮದುವೆ ಅನಾಚಾರ ಪಿಡುಗಿನ ವಿರುದ್ದ ವಿಷಯ ಮಂಡಣೆಯನ್ನು ಮಾಡಲಿದ್ದಾರೆ ಹಾಗೂ ಡಾ. ರಫೀಕ್ ಮಾಸ್ಟರ್’ ರವರು ಮಾದಕ ವ್ಯಸನ ವಿಷಯದಲ್ಲಿ ಪ್ರೇರಣಾ ಭಾಷಣವನ್ನು ಮಾಡಲಿದ್ದಾರೆ.
ವೇಣೂರು ಠಾಣಾ ಸಬ್ ಇನ್ಸ್’ಪೆಕ್ಟರ್ ಶ್ರೀಶೈಲಾ ಮುರಗೋಡು, ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ, ಇದರ ಅಧ್ಯಕ್ಷರಾದ ನವಾಝ್ ಶರೀಫ್ ಕಟ್ಟೆ ಮತ್ತು ಸ್ಯಳೀಯ ಜಮಾತ್ ಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಬದ್ರಿಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಪ್ರಧಾನ ಕಾರ್ಯದರ್ಶಿ ಸಾಧಿಕ್ ಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.