ನ್ಯಾಯತರ್ಪು: ಡಿ.25. ನ್ಯಾಯತರ್ಪು ರಕೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಇದರ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಭಜನೋತ್ಸವ ನೆರವೇರಿತು. ಬೆಳಿಗ್ಗೆ ಗಣಹೋಮ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಕೇಶ್ವರಿಪದವು ಭಜನಾ ಮಂಡಳಿಯ ವಠಾರದಲ್ಲಿ ತಾಲೂಕಿನ ಸುಮಾರು 25 ಕ್ಕೂ ಹೆಚ್ಚು ವಿವಿಧ ಭಜನಾ ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೋತ್ಸವ ಜರುಗಿತು.
ಹಿಂದುತ್ವ ನಾಡಿನ ಜೀವ ನಾಡಿ, ದೇಶದ ಸಂಸ್ಕಾರ ಜೊತೆಯಲ್ಲಿ ಹಿಂದೂ ಸಂಘಟನೆ ಹಾಗೂ ಸಂಸ್ಕೃತಿಯನ್ನು ಗಟ್ಟಿಯಾಗಿಸಲು ಭಜನೆ ಒಂದಾಗಿದೆ. ಭಜನೆಯಿಂದ ಮಾನಸಿಕವಾಗಿ, ದೈಹಿಕವಾಗಿ,ಅಧ್ಯಾತ್ಮಿಕವಾಗಿ ದೇವರನ್ನು ಭಕ್ತಿಯಿಂದ ಒಳಿಸಲು ಭಜನೆಯಿಂದ ಮಾತ್ರ ಸಾಧ್ಯ ಎಂದು ಬೆಂಗಳೂರು ಯುವ ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತಾನಾಡಿದರು.
ವಿವಿಧ ಭಜನಾ ಮಂಡಳಿಗಳ ಸದಸ್ಯರಿಂದ ಏಕಕಾಲದಲ್ಲಿ ಕುಣಿತ ಭಜನೋತ್ಸವ ನಡೆಯಿತು.
ಸಾಧಕರಿಗೆ ಸನ್ಮಾನಿತರು :
ಯುವ ಉದ್ಯಮಿ ಕಿರಣ್ ಚಂದ್ರ ಡಿ.ಪುಷ್ಪಗಿರಿ ಬೆಂಗಳೂರು, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗವೇಣಿ ಕೆ.ಎಸ್. ಹಾಗೂ ಭಾರತೀಯ ಭೂಸೇನೆಯ ನಿವೃತ್ತ ಸೈನಿಕ ವಿಕ್ರಂ ಜೆ.ಎನ್.ವಂಜಾರೆ ಅವರನ್ನು ಸನ್ಮಾನಿಸಿ, ಗೌರವಿಸಿದರು.
ರಾತ್ರಿ ಕಲ್ಲಡ್ಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಗೌರವಾಧ್ಯಕ್ಷ ರಂಜನ್ ಎಂ.,ಅಧ್ಯಕ್ಷ ವಸಂತ ಗೌಡ ಕೆ,ಉಪಾಧ್ಯಕ್ಷ ರಮೇಶ್ ವಿ,ಕಾರ್ಯದರ್ಶಿ ಯೋಗೀಶ್ ಎಂ,ಜತೆ ಕಾರ್ಯದರ್ಶಿ ವಿನಯ್,ಕೋಶಾಧಿಕಾರಿ,ಸಹ ಅರ್ಚಕ ಶೇಖರ ಗೌಡ ಎಂ,ಪ್ರಧಾನ ಅರ್ಚಕ ಜಗನ್ನಾಥ ವಿ,ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಭಕ್ತಾದಿಗಳು ಭಾಗವಹಿಸಿದರು. ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.