37.6 C
ಪುತ್ತೂರು, ಬೆಳ್ತಂಗಡಿ
March 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಡಿ.28-ಜ.1: ಓಡಿಲ್ನಾಳ ಕಿರಾತಮೂರ್ತಿಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

ಓಡಿಲ್ನಾಳ: ಶ್ರೀರಾಮ ನಗರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಡಿ.28 ರಿಂದ ಜ.1 ರವರೆಗೆ ಕ್ಷೇತ್ರದ ತಂತ್ರಿಗಳಾದ ವೇ.ಮೂ. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಡಿ.28 ರಂದು ಬೆಳಿಗ್ಗೆ ಹೊರೆಕಾಣಿಕೆ, ತಂತ್ರಿಗಳ ಆಗಮನ, ಮಧ್ಯಾಹ್ನ ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ ಅನ್ನಸಂತರ್ಪಣೆ, ರಾತ್ರಿ ಪೂಜಾ ಉತ್ಸವ ನಡೆಯಲಿದೆ.


ಡಿ.29ರಂದು ಬೆಳಿಗ್ಗೆ ಗಣಹೋಮ, ದುರ್ಗಾಹೋಮ ಕಲಶ ಪೂಜೆ, ಕಲಶ ಅಭಿಷೇಕ ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ. ಸಂಜೆ ಪೂಜೆ, ರಾತ್ರಿ ಉತ್ಸವ ಕಟ್ಟೆಪೂಜೆ ಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುನ “ಕದಂಬ” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.


ಡಿ.30ರಂದು ಬೆಳಿಗ್ಗೆ ಗಣಹೋಮ, ರುದ್ರಹೋಮ, ಶೋಡರ ಬಲಿ ಉತ್ಸವ, ಕಲಶ ಪೂಜೆ, ಉಪದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪೂಜೆ, ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ಪ್ರಸಾದ ವಿತರಣೆ. ಸಂಜೆ ದೇವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್‍ಯಾರುರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಶಶಿಧರ ಶೆಟ್ಟಿ ನವಶಕ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್, ಯುವ ಉದ್ಯಮಿ ಕಿರಣ್‌ಚಂದ್ರ ಡಿ ಭಾಗವಹಿಸಲಿದ್ದಾರೆ.


ಡಿ.31ರಂದು ಬೆಳಿಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಕಲಶ ಪೂಜೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪೂಜೆ, ಉತ್ಸವ ಕಟ್ಟೆಪೂಜೆ, ಶಯನ, ರಾತ್ರಿ ಶಾರದ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಅಭಿನಯಿಸುವ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ” ತುಳು ಪೌರಾಣಿಕ ಮತ್ತು ಭಕ್ತಿ ಪ್ರಧಾನ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಜ.1ರಂದು ಬೆಳಿಗ್ಗೆ ಗಣಹೋಮ, ಯಾತ್ರಾಹೋಮ, ಕವಾಟ ಉದ್ಘಾಟನೆ, ಸಂಜೆ ಮಹಾ ರಂಗಪೂಜೆ, ಆರಾಟ ಬಲಿ, ಆರಾಟ ಉತ್ಸವ ಧ್ವಜಅವರೋಹಣ, ಮಂಗಳ ಮಂತ್ರಾಕ್ಷತೆ. ಜ.೨ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

Related posts

ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಜಯ; ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Suddi Udaya

ಮಚ್ಚಿನ : ಸರಕಾರಿ ಪ್ರೌಢ ಶಾಲೆಯಲ್ಲಿ ಗಾಂಧೀ ಜಯಂತಿ ಆಚರಣೆ

Suddi Udaya

2೦47ರಲ್ಲಿ ವಿಕಸಿತ ಭಾರತ : ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಜೆಸಿಐ ಬೆಳ್ತಂಗಡಿಯ ಪೂರ್ವ ಅಧ್ಯಕ್ಷ ಪೃಥ್ವಿರಂಜನ್ ರಾವ್ ರವರಿಗೆ ನುಡಿ ನಮನ

Suddi Udaya

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಆ. 27 ರಂದು ಹೊಸ ಎಟಿಎಂ ಮತ್ತು ಲಿಪ್ಟ್ ನ ಉದ್ಘಾಟನೆ

Suddi Udaya
error: Content is protected !!