ಅರಸಿನಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂಡುಮುಗೇರು ದೇವಸ್ಥಾನದ ಬಳಿಯ ರೇವತಿ ಎಂಬವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಮಂಜೂರಾದ ವಾತ್ಸಲ್ಯ ಮನೆ ನಿರ್ಮಾಣದ ಅಡಿಪಾಯದ ಶ್ರಮದಾನವು ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಡಿ.೨೬ರಂದು ನಡೆಸಲಾಯಿತು.
ವಲಯ ಮೇಲ್ವಿಚಾರಕಿ ಶ್ರೀಮತಿ ಶಶಿಕಲಾ ರವರ ಮಾರ್ಗದರ್ಶನದಲ್ಲಿ ಘಟಕ ಸಂಯೋಜಕಿ ಶ್ರೀಮತಿ ರಶ್ಮಿತಾ ರವರ ಸಂಯೋಜನೆಯಲ್ಲಿ ನಡೆದ ಶ್ರಮದಾನದಲ್ಲಿ ಘಟಕ ಪ್ರತಿನಿಧಿ ಆನಂದ ದನಿಲ, ಅವಿನಾಶ್ ಭಿಡೆ, ಸುರೇಶ್ ಶಿಬಾಜೆ, ಸೋಮಶೇಖರ್, ಬೇಬಿ ಪೆರ್ಲ, ಹರೀಶ ವಳಗುಡ್ಡೆ, ಕಿರಣ್ ಸಂಕೇಶ, ರಮೇಶ್ ಬೈರಕಟ್ಟ ಭಾಗವಹಿಸಿದ್ದರು.
ಲಘು ಉಪಾಹಾರದ ವ್ಯವಸ್ಥೆಯನ್ನು ಹರೀಶ್ ವಳಗುಡ್ಡೆ, ಬೆಳಕಿನ ವ್ಯವಸ್ಥೆಯನ್ನು ಚಾಮುಂಡೇಶ್ವರಿ ಸೌಂಡ್ಸ್ ಮತ್ತು ಲೈಟಿಂಗ್‌ನ ದಯಾನಂದ ಶೆಟ್ಟಿ ಇವರು ಮಾಡಿಕೊಟ್ಟರು.