ಬಳಂಜ: ಬೋಂಟ್ರೊಟ್ಟುಗುತ್ತು ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್‌ನ ಧರ್ಮರಸು ದೈವ-ಕೊಡಮಣಿತ್ತಾಯ ಮೈಸಂದಾಯ-ಅಂಗಣ ಪಂಜುರ್ಲಿ ಕಲ್ಲುರ್ಟಿ-ಕಲ್ಕುಡ, ಕ್ಷೇತ್ರ ಗುಳಿ ದೈವಗಳಿಗೆ ಪ್ರಧಾನ ಕಲಶಾಭಿಷೇಕ, ವಾರ್ಷಿಕ ಪ್ರತಿಷ್ಠಾ ವರ್ಧಂತಿ ನೇಮೋತ್ಸವ ಹಾಗೂ ಕೇತುಲ್ಲಾಯ ದೈವಕ್ಕೆ ಪಂಚಪರ್ವ ಸೇವೆಯು ಡಿ.೩೧ರಂದು ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿ ಮೊಕ್ತೇಸರ ಶೀತಲ್ ಪಡಿವಾಳರ ಮಾರ್ಗದರ್ಶನದಲ್ಲಿ ಮದ್ದಡ್ಕ ಶ್ರೀನಿವಾಸ ಅಮ್ಮಣ್ಣಾಯ ಅಸ್ರಣ್ಣರ ನೇತೃತ್ವದಲ್ಲಿ ಬೋಂಟ್ರೊಟ್ಟುಗುತ್ತು ಧರ್ಮದೈವಗಳ ಮೂಲಸ್ಥಾನದಲ್ಲಿ ನಡೆಯಲಿದೆ.
ಡಿ.31ರಂದು ಬೆಳಿಗ್ಗೆ ಭಂಡಾರ ಚಾವಡಿಯಲ್ಲಿ ಪ್ರಾರ್ಥನೆ ಪುಣ್ಯಾಹ ಕಲಶ ದೈವಗಳ ಭಂಡಾರ ಇಳಿಸುವುದು, ಮೂಲ ಸ್ಥಾನದಲ್ಲಿ ತೋರಣ ಮುಹೂರ್ತ, ನಾಗ ಸನ್ನಿಧಿಯಲ್ಲಿ ತನು-ತಂಬಿಲ ಸೇವೆ, ದೈವಸ್ಥಾನದಲ್ಲಿ ಪ್ರಧಾನ, ದೈವಗಳಿಗೆ ಕಲಶಾಭಿಷೇಕ ಪರ್ವ ನಡೆಯಲಿರುವುದು. ಸಂಜೆ ದೈವಗಳ ನೇಮೋತ್ಸವ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.