ಬೆಳ್ತಂಗಡಿ: ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್‌ನಲ್ಲಿ ಎಂ.ಎಸ್ಸಿ. ಅರಿವಳಿಕೆ ಮತ್ತು ಆಪರೇಷನ್ ಥಿಯೇಟರ್ ತಂತ್ರಜ್ಞಾನ (Anesthesia & Operation Theatre Technology) ವಿಭಾಗದಲ್ಲಿ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದಲ್ಲಿ ಧರ್ಮಸ್ಥಳದ ಕು| ನಿರೀಕ್ಷಾ ರವರು ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ತಮ್ಮ ಸಾಧನೆಗಾಗಿ ಅವರು “ಬೆಸ್ಟ್ ಔಟ್‌ಗೋಯಿಂಗ್ ಸ್ಟೂಡೆಂಟ್” ಪ್ರಶಸ್ತಿ ಹಾಗೂ ಚಿನ್ನದ ಪದಕವನ್ನು ಗಳಿಸಿದ್ದಾರೆ. ಇವರು ಧರ್ಮಸ್ಥಳ ಜೋಡುಸ್ಥಾನದ ನಿವಾಸಿ ಅರುಣ್ ಕುಮಾರ್ ಮತ್ತು ಶ್ರೀಮತಿ ಮಮತಾ ಅರುಣ್ ಇವರ ಪುತ್ರಿ.