ಓಡಿಲ್ನಾಳ: ಶ್ರೀರಾಮ ನಗರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಡಿ.28 ರಿಂದ ಜ.1 ರವರೆಗೆ ಕ್ಷೇತ್ರದ ತಂತ್ರಿಗಳಾದ ವೇ.ಮೂ. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಇಂದು ಬೆಳಿಗ್ಗೆ ಊರವರಿಂದ ಹೊರೆಕಾಣಿಕೆ ಸಮರ್ಪಿಸಲಾಯಿತು, ನಂತರ ತಂತ್ರಿಗಳ ಆಗಮನ, ಮಧ್ಯಾಹ್ನ ತೋರಣ ಮುಹೂರ್ತ, ಧ್ವಜಾರೋಹಣ, ಮಹಾಪೂಜೆ ನಡೆಯಿತು. ರಾತ್ರಿ ಪೂಜಾ ಉತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್‍ಯಾರು, ಪ್ರಧಾನ ಅರ್ಚಕ ಪ್ರಸನ್ನ ಭಟ್, ಪ್ರಧಾನ ಕಾರ್ಯದರ್ಶಿ ವಿಮಲಾಕ್ಷ ಗೌಡ ಪಡ್ಪು, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ, ಯುವ ಸಮಿತಿ ಅಧ್ಯಕ್ಷ ನಿತೇಶ ಕೆ. ಓಡಿಲ್ನಾಳ, ಹಾಗೂ ಟ್ರಸ್ಟಿಗಳು, ಯುವ ಸಮಿತಿ, ಭಜನಾ ಸಮಿತಿ, ಮಹಿಳಾ ಸಮಿತಿಯ ಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.