ಕಲ್ಮಂಜ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಂಕರ್ ರಾವ್ ರವರಿಂದ ಪರೀಕ್ಷಾ ಪೂರ್ವ ತಯಾರಿ ಹಾಗೂ ಕೆರಿಯರ್ ಗೈಡೆನ್ಸ್ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಶಂಕರ್ ರಾವ್ ಅವರು ವಿದ್ಯಾರ್ಥಿಗಳಿಗೆ ಶ್ರಮಪಟ್ಟರೆ ಮಾತ್ರ ಸಾಧಿಸಲು ಸಾಧ್ಯ. ನೀವು ಬೇರೆಯವರಿಗಾಗಿ ಓದಬೇಡಿ’ನಿಮಗಾಗಿ ಓದಿ.ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ.ಪ್ರಯತ್ನವೊಂದೇ ಸಫಲತೆಗೆ ದಾರಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕಿ ಪೂರ್ಣಿಮಾ ಸ್ವಾಗತಿಸಿ ವಸಂತಿಯವರು ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಮಾಲಿನಿ ಹೆಗಡೆ, ಸವಿತಾ, ಸಾವಿತ್ರಿ, ಪ್ರೇಮಲತಾ, ಹೇಮಲತಾ, ಸುಧೀಂದ್ರ ಹಾಗೂ ಪ್ರೇಮಾ ಯಚ್ ವಿ ಸಹಕರಿಸಿದರು.