ಕೊಕ್ಕಡ :ನಿಡ್ಲೆಯಲ್ಲಿ ಗಗನ್ ಸ್ಟುಡಿಯೋ ಹೊಂದಿರುವ ಗಂಗಾಧರ್ ರವರು ಸೌತಡ್ಕ ರಸ್ತೆಯ ಅನಾರು ಕಾಂಪ್ಲೆಕ್ಸ್ ನಲ್ಲಿ ಗಗನ್ ಪ್ರಾವಿಷನ್ ಸ್ಟೋರ್ಸ್ ಮತ್ತು ಗಗನ್ ಸ್ಟುಡಿಯೋದ ಶುಭಾರಂಭವು ಡಿ. 27ರಂದು ಜರುಗಿತು.
ಮಾಲಕರ ಮಕ್ಕಳಾದ ಹ್ವಶ್ವಿ.ಜಿ ಮತ್ತು ಮಾಸ್ಟರ್ ಯಹ್ನಿಕ್ ಜಿ. ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಿತ್ತಬಾಗಿಲು ಗ್ರಾ. ಪಂ. ಸದಸ್ಯ ಚಂದ್ರಶೇಖರ್ ತಂಗೇತ್ತಿಪಾಳು ದಿಡುಪೆ, ಮಮತ ಮಂಗಳೂರು , ಕಟ್ಟಡದ ಮಾಲಕರಾದ ರಾಘವ ಗೌಡ ಅನಾರು, ಜಗದೀಶ್ ಅನಾರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಬಂದಂತಹ ಅತಿಥಿ ಗಣ್ಯರನ್ನು ಶ್ರೀಮತಿ ಗೀತಾಂಜಲಿ , ಗಂಗಾಧರ್ ಗೌಡ ಮತ್ತು ಮಕ್ಕಳು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದರು.