ಬೆಳ್ತಂಗಡಿ; ಕ್ರಿಸ್ಮಸ್ ಹಬ್ಬದ ಹಿನ್ನಲೆಯಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿಯಾಗಿ ಶುಭ ಹಾರೈಸಿದರು.
ಬಿಷಪ್ ಹೌಸ್ ನ ಧರ್ಮಗುರುಗಳಾದ ಫಾ. ಕುರಿಯಾಕೋಸ್ ವೆಟ್ಟುವಯಿ, ಫಾ. ಅಬ್ರಹಾಂ ಪಟ್ಟೇರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ತಾಲೂಕು ಸಮಿತಿ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿ.ಸಿ, ಉಪಾಧ್ಯಕ್ಷ ಜೋಬಿ, ಪ್ರಧಾನ ಕಾರ್ಯದರ್ಶಿ ಪ್ರಿನ್ಸ್ ತೋಮಸ್, ಅಶ್ರಫ್ ಲಾಯಿಲ, ರಿಚಾರ್ಡ್ ಗೋವಿಯಸ್, ಫ್ರಾನ್ಸೀಸ್, ಸನ್ನಿ ಹಾಗೂ ಇತರರು ಇದ್ದರು.