ಬೆಳ್ತಂಗಡಿ: ಮೂಡುಬಿದಿರೆಯ ಮೂಡುಕೊಣಾಜೆ ಗ್ರಾಮದ ಕೈಕಂಜಿ ಪಡ್ಡು ಸೇತುವೆ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಮುಂದಾದ ವ್ಯಕ್ತಿಯೊಬ್ಬನನ್ನು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕುವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್( 38) ಗುರುತಿಸಲಾಗಿದೆ.
ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಪತ್ರಾಂಕಿತ ಅಧಿಕಾರಿಯವರು ಶೋಧನೆ ನಡೆಸಿದಾಗ ಆತನ ವಶದಲ್ಲಿದ್ದ ಒಟ್ಟು 900ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಗಾಂಜಾದ ಅಂದಾಜು ಮೌಲ್ಯ ರೂ. 22000 ಆಗಿರುತ್ತದೆ ಅಂದಾಜಿಸಲಾಗಿದೆ.
ಇದೀಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.