ಬೆಳ್ತಂಗಡಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ನಿರಖು ಠೇವಣಿ ಸಂಗ್ರಹಕರಾದ. ಧರ್ಮಸ್ಥಳ ಕನ್ಯಾಡಿ ನಿವಾಸಿ ಮೂಲ್ಕಿ ಪಾಪೇಡಿಗುತ್ತು ಪಣಿರಾಜ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಸ್ವರ್ಗಸ್ತರಾಗಿದ್ದಾರೆ.
ಇವರು ಸಹಕಾರಿ ಸಂಘದ ಪ್ರಾರಂಭದಿಂದಲೂ ಅತ್ಯಧಿಕ ಠೇವಣಿಗಳನ್ನು ಸಂಗ್ರಹಣೆ ಮಾಡಿ, ಸಂಸ್ಥೆಯ ಬೆಳವಣಿಗೆಗೆ ಬಹಳಷ್ಟು ಶ್ರಮವಹಿಸಿದ್ದಾರೆ.
ಮೃತರು ಪತ್ನಿ ಇಬ್ಬರು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಮೃತರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಹಾಗೂ ಕುಟುoಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲಿಯೆಂದು ಪ್ರಾರ್ಥಿಸುತ್ತೇನೆ. ಎಂದು ಡಾ ಕೆ ಜಯಕೀರ್ತಿ ಜೈನ್ ಅಧ್ಯಕ್ಷರು ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ. ಬೆಳ್ತಂಗಡಿ ಸಂತಾಪ ಸೂಚಿಸಿದ್ದಾರೆ.