21.8 C
ಪುತ್ತೂರು, ಬೆಳ್ತಂಗಡಿ
December 29, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಕ್ಸಲೆಂಟ್ ಮೂಡಬಿದ್ರೆ ಆಶ್ರಯದಲ್ಲಿ ಜಾಗೃತಿ ಅಭಿಯಾನ

ಮೂಡುಬಿದಿರೆ: ಸ್ಥಳೀಯ ಕಲ್ಲಬೆಟ್ಟಿನ ಎಕ್ಸಲೆಂಟ್ ವಿದ್ಯಾಸಂಸ್ಥೆಯ ವತಿಯಿಂದ ಮೂಡುಬಿದಿರೆ ಪರಿಸರವನ್ನು ಸ್ವಚ್ಛವಾಗಿ ಇಡಲು ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಮೂಡುಬಿದಿರೆ ಜ್ಯೋತಿನಗರದ ಪೋಲೀಸು ಠಾಣೆ ಪ್ರದೇಶದಿಂದ ಪ್ರಾರಂಭಗೊಂಡ ನಾಗರಿಕ ಜಾಗೃತಿ ಜಥಾ ಕಾರ್ಯಕ್ರಮ ಕಲ್ಲಬೆಟ್ಟಿನ ಉರ್ಪೆಲ್ ಪಾದೆ ತನಕ ರಾಜ್ಯ ರಸ್ತೆ ಸಾರಿಗೆ ಗುಂಟ ನಡೆಯಿತು. ವಿವಿಧ ಜಾಗೃತಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ನೇತಾರರೊಂದಿಗೆ ಘೋಷಣೆಗಳನ್ನು ಮೊಳಗಿಸುತ್ತ ಕಾಲ್ನಾಡಿಗೆಯಲ್ಲಿ ನಡೆದರು.


ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ವಿದ್ಯಾರ್ಥಿಗಳ ಮೂಲಕ ನಾಗರಿಕರನ್ನು ಸ್ವಚ್ಛತೆಯ ಕಡೆಗೆ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಿಲ್ಲಿಸುವ ಬಗೆಗೆ ಜಾಗೃತಿ ಮೂಡಿಸಲು ಒಂದು ಚಿಕ್ಕ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಎಲ್ಲರೂ ಸಹಕರಿಸಿ ಮೂಡುಬಿದಿರೆಯನ್ನು ಸ್ವಚ್ಛ ಪ್ಲಾಸ್ಟಿಕ್ ಮುಕ್ತ ಮಾಡಲು ಕೈ ಜೋಡಿಸಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ಎ ಎಸ್ ಐ ರಾಜೇಶ್, ಪ್ರಶಾಂತ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರುಗಳು, ಕನಿಷ್ಠ ಮಕ್ಕಳಿಂದಲಾದರೂ ಈ ಪ್ರಯತ್ನ ಯಶಸ್ವಿಗೊಂಡು ಸ್ವಚ್ಛ ಮೂಡುಬಿದಿರೆಯ ಕನಸು ಸಾಕಾರಗೊಳ್ಳಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಕೊರಗಪ್ಪ, ಮಾಜಿ ಉಪಧ್ಯಾಕ್ಷರಾದ ಶ್ರೀಮತಿ ಸುಜಾತ, ಸುರೇಶ್ ಕೋಟ್ಯಾನ್, ಕ್ಲಾರಿಯೋ ಡಿಸೋಜಾ, ಹಾಗೂ ಮೂಡಬಿದ್ರೆ ಪೋಲೀಸ್ ಸಿಬ್ಬಂದಿವರ್ಗ, ಮೂಡ ಅಧ್ಯಕ್ಷರಾದ ಹರ್ಷವರ್ಧನ್ ಪಡಿವಾಳ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೃಷ್ಣರಾಜ್ ಹೆಗ್ಡೆ , ಸಿ ಹೆಚ್ ಮೆಡಿಕಲ್ ಮಾಲಕರಾದ ಸಿ ಎಚ್ ಗಫೂರ್, ಜೈನ್ ಮಿಲನ ವಲಯ ನಿರ್ದೇಶಕರಾದ ಜಯರಾಜ್ ಕಂಬಳಿ, ರಾಕೇಶ್, ಕೊಡಂಗಲ್ಲು ಫ್ರೆಂಡ್ಸ್ ನ ಸದಸ್ಯರಾದ ಸಂಪತ್ ಕುಮಾರ್ ಜೈನ್, ಜಗಧೀಶ್ ಭಟ್ ಹಾಗೂ ಸಂತೋಷ್ ಶೆಟ್ಟಿ ಹಾಗೂ ಕೊಡಂಗಲ್ಲು ಆಟೋ ಚಾಲಕ ಸಂಘದ ಸದಸ್ಯರಾದ ಜಯರಾಮ್ ಕರ್ಕೇರ, ಮಹಾಮ್ಮಯಿ ದೇವಸ್ಥಾನದ ಆಡಳಿತ ಮಂಡಳಿ, ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಮ್ಯಾನೆಜರ್ ಅನಿತಾ ಮತ್ತು ಸಿಬ್ಬಂಧಿಗಳು, ಕಲ್ಲಬೆಟ್ಟು ಹಾಲು ಉತ್ಪಾದಕರ ಸಂಘದ ಅಧೂಳಿ ಸತೀಶ್ ಹಾಗೂ ಸದಸ್ಯರು, ಮೂಡಬಿದ್ರೆ ಪೋಲೀಸ್ ಸಿಬ್ಬಂದಿ ವರ್ಗ, ಶಕ್ತಿ ಪೆಟ್ರೋಲ್ ಬಂಕ್ ಇದರ ಮಾಲಕರಾದ ಧಿರಜ್ ಕೊಲ್ಕೆ , ಶಶಿಧರ್ ಕಲ್ಲಬೆಟ್ಟು , ಅಕ್ಷಯ್ ಜೈನ್ ಹಾಗೂ ಇತರ ಮುಖಂಡರು ಹಾಜರಿದ್ದರು.

ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್ ಸ್ವಾಗತಿಸಿ ವಂದಿಸಿದರು.

Related posts

ಉಜಿರೆ: ಚರ್ಮಗಂಟು ಲಸಿಕೆ ಕಾರ್ಯಕ್ರಮ

Suddi Udaya

ಅಳದಂಗಡಿ ಸಿಎ ಬ್ಯಾಂಕಿನಿಂದ ರೂ.25 ಸಾವಿರ ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಮಡಂತ್ಯಾರು; ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ತೆಂಕಕಾರಂದೂರು: ರಸ್ತೆಯ ಬದಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ

Suddi Udaya

ಉಜಿರೆ ಎಸ್. ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಗೆ ಡಿ.ಶ್ರೇಯಸ್ ಕುಮಾರ್ ಭೇಟಿ

Suddi Udaya

ನಾರಾವಿ ಸಂತ ಅಂತೋನಿ ಪದವಿ ಕಾಲೇಜಿನ ಎನ್ ಎಸ್ ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya
error: Content is protected !!