September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಯತ್ನ: ಕುವೆಟ್ಟು ನಿವಾಸಿ ಮೊಹಮ್ಮದ್ ರಫೀಕ್ ಬಂಧನ

ಬೆಳ್ತಂಗಡಿ: ಮೂಡುಬಿದಿರೆಯ ಮೂಡುಕೊಣಾಜೆ ಗ್ರಾಮದ ಕೈಕಂಜಿ ಪಡ್ಡು ಸೇತುವೆ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಮುಂದಾದ ವ್ಯಕ್ತಿಯೊಬ್ಬನನ್ನು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕುವೆಟ್ಟು ಗ್ರಾಮದ ಮದಡ್ಕ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್( 38) ಗುರುತಿಸಲಾಗಿದೆ.

ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಪತ್ರಾಂಕಿತ ಅಧಿಕಾರಿಯವರು ಶೋಧನೆ ನಡೆಸಿದಾಗ ಆತನ ವಶದಲ್ಲಿದ್ದ ಒಟ್ಟು 900ಗ್ರಾಂ ತೂಕದ ಗಾಂಜಾವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಗಾಂಜಾದ ಅಂದಾಜು ಮೌಲ್ಯ ರೂ. 22000 ಆಗಿರುತ್ತದೆ ಅಂದಾಜಿಸಲಾಗಿದೆ.


ಇದೀಗ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Related posts

ಭಾರತೀಯ ಭೂ ಸೇನೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಚಂದಪ್ಪ ಗೌಡ: 20 ವರ್ಷಗಳಿಂದ ತುಂಡು ಭೂಮಿಗಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ

Suddi Udaya

ಬಂದಾರು : ಬಟ್ಲಡ್ಕ ಜುಮಾ ಮಸೀದಿಯಲ್ಲಿ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಧ್ವಜಾರೋಹಣ

Suddi Udaya

ಚಾರ್ಮಾಡಿ : ಎಸ್ಐಟಿ ತಂಡದ ಎಸ್ಪಿ ಮತ್ತು ಇತರ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನೋವಾ ಕಾರು ಪಲ್ಟಿ

Suddi Udaya

ಚಾರ್ಮಾಡಿ: ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ

Suddi Udaya

ಗುರುವಾಯನಕೆರೆಯಲ್ಲಿ ನಿಲ್ಲಿಸಿದ ರೂ.68 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಕಳವು

Suddi Udaya

ಚೆಸ್ ಸ್ಪರ್ಧೆ: ಎಲ್.ಸಿ.ಆರ್. ಇಂಡಿಯನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ನಮನ್ ಸಿ ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!