ಬೆಳ್ತಂಗಡಿ: 2019ರಲ್ಲಿ ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ಮನೆಗಳು ಕೊಚ್ಚಿ ಹೋಗಿ ಜನರು ಆಸರೆಯನ್ನು ಕಳೆದುಕೊಂಡಿದ್ದರು.
ಈ ವೇಳೆ ಈ ಜನರ ನೆರವಿಗೆ ಬದುಕು ಕಟ್ಟೋಣ ಬನ್ನಿ ತಂಡ ನಿಂತಿತ್ತು. ಕೊಚ್ಚಿ ಹೋಗಿದ್ದ ಕೊಳಂಬೆಯನ್ನು ಬದುಕು ಕಟ್ಟೋಣ ಬನ್ನಿ ಮರು ನಿರ್ಮಿಸಿತ್ತು. ಕೊಳಂಬೆಯ ಮರು ನಿರ್ಮಾಣದ ಬಗ್ಗೆ ನೈಜ ಕತೆಯನ್ನಾಧರಿಸಿ ತೆಗೆದ ಕಿರುಚಿತ್ರ ಕೊಳಂಬೆ.
ಇದೀಗ ಕೊಳಂಬೆ ಕಿರುಚಿತ್ರ ರೆಡ್ ಇನ್ಕಾರ್ನೇಷನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ- 2025 ಪ್ರಶಸ್ತಿಗೆ ಆಯ್ಕೆಯಾಗಿದೆ. ದಸ್ಕತ್ ಸಿನಿಮಾ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ನಿರ್ದೇಶಿಸಿ, ಕೋಟ್ಯಾನ್ ಕ್ರಿಯೇಷನ್ಸ್ ಕೊಳಂಬೆ ಕಿರುಚಿತ್ರದ ನಿರ್ಮಾಣ ಮಾಡಿತ್ತು.