ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಜಿನಾಭಜನಾ ಸ್ಪರ್ಧೆಗೆ ಆಯ್ಕೆ

ಉಜಿರೆ: ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷ ವೀರಾಂಗನ ಡಿ. ಅನಿತಾ ಸುರೇಂದ್ರ ಕುಮಾ‌ರ್ ಅವರ ಪರಿಕಲ್ಪನೆಯ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಬಜಗೋಳಿಯ ಸುಮ್ಮಗುತ್ತುವಿನಲ್ಲಿ ನಡೆದ ಭಾರತೀಯ ಜೈನ್ ಮಿಲನ್ ವಲಯ 8ರ 9ನೇ ಆವೃತ್ತಿಯ ಮಂಗಳೂರು ವಿಭಾಗ ಮಟ್ಟದ ಜಿನ ಭಜನಾ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ ಉಜಿರೆಯ ಹರ್ಷದಾ ತಂಡ ನಾಲ್ಕನೇ ಸ್ಥಾನ ಹಾಗೂ ಬ್ರಾಮರಿ ತಂಡ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಈ ತಂಡದಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳು ಅಕ್ಷರ್, ನಿಷ್ಕಾ ಜೈನ್ ಭಾಗವಹಿಸಿ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ವಿಜೇತ ಜಿನಭಜನಾ ತಂಡಗಳಿಗೆ ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗದ ಅಧ್ಯಕ್ಷ ರಾದ ಸೋನಿಯಾ ಯಶೋವರ್ಮ ರವರು ಅಭಿನಂದಿಸಿರುತ್ತಾರೆ.
ಜನವರಿ 03 ಮತ್ತು 04 ರಂದು ನಡೆಯಲಿರುವ ರಾಜ್ಯಮಟ್ಟದ ಜಿನಾಭಜನಾ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮೀ ನಾಯಕ್ ಅಭಿನಂದಿಸಿದ್ದಾರೆ.

Related posts

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಸುದರ್ಶನ್ ಶೆಟ್ಟಿ ನೇಮಕ

Suddi Udaya

ಶಿಶಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya

ಬೆಳ್ತಂಗಡಿ: ಶಶಾಂಕ ಕುಳಮರ್ವ ರವರಿಗೆ ಸುರತ್ಕಲ್ ಎನ್.ಐ.ಟಿ.ಕೆ. ಯಿಂದ ಪಿ.ಎಚ್.ಡಿ. ಪದವಿ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ನಿಡ್ಲೆ ಸಹಕಾರಿ ಸಂಘದ ಅಧ್ಯಕ್ಷ ಕೆ. ರಮೇಶ್ ರಾವ್ ಬೆಂಬಲ

Suddi Udaya

ಪುದುವೆಟ್ಟು: ಅಡ್ಯಾದಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya
error: Content is protected !!