ಬೆಳ್ತಂಗಡಿ: ಕಳೆದ ಸುಮಾರು 15 ವರ್ಷಗಳಿಂದ ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ಜಾತ್ರಾ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಸೇವೆಯನ್ನು
ನೀಡುತ್ತಿದ್ದ ಬಸವ ಶ್ಯಾಮ ಇಂದು ಸಾವನ್ನಪ್ಪಿದೆ.
ಶ್ಯಾಮ ಬಸವ ( ನಂದಿ ) ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ಜಾತ್ರಾ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಸೇವೆಯನ್ನು ಸಲ್ಲಿಸುತ್ತಿತ್ತು. ಬಸವನನ್ನು ಪುರುಷೋತ್ತಮ ಟೈಲರ್ ಮಡ್ಯಾಳಗುಂಡಿ ಆರೈಕೆಯನ್ನು ಮಾಡುತ್ತಿದ್ದರು ಹಾಗೂ ಕಳೆದ 7 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಮಧೇನು ಗೋಶಾಲೆ ಹಲ್ಲಿಂಗೇರಿಯಲ್ಲಿ ಆರೈಕೆಯನ್ನು ಮಾಡುತ್ತಿದ್ದರು.
ಇಂದು ಅಲ್ಪಕಾಲಿಕ ಅನಾರೋಗ್ಯದ ಕಾರಣ ಹಲ್ಲಿಂಗೇರಿ ಗೋಶಾಲೆಯಲ್ಲಿ ಸಾವನ್ನಪ್ಪಿದೆ.