25 C
ಪುತ್ತೂರು, ಬೆಳ್ತಂಗಡಿ
January 1, 2025
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಜ.4: ವಿದ್ವತ್ ಪಿ ಯು. ಕಾಲೇಜು ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ.

ಗುರುವಾಯನಕೆರೆ: ವಿದ್ವತ್ ಪಿಯು ಕಾಲೇಜು , ಗುರುವಾಯನಕೆರೆ ಇವರ ನೇತ್ರತ್ವದಲ್ಲಿ, ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಯೋಗದೊಂದಿಗೆ ಜ. 4 ರಂದು ನಡೆಯಲಿರುವ “ಬೆಳ್ತಂಗಡಿ ತಾಲೂಕು ಮಟ್ಟದ ಪುರುಷರ ಮತ್ತು ಆಹ್ವಾನಿತ ಮಹಿಳೆಯರ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ”ದ ಪೂರ್ವಭಾವಿ ಸಭೆಯು ಡಿ.28 ರಂದು ವಿದ್ವತ್ ಪಿಯು ಕಾಲೇಜು, ಗುರುವಾಯನಕೆರೆಯಲ್ಲಿ ನಡೆಯಿತು.

ಸಭೆಯಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು, ಕಾರ್ಯದರ್ಶಿ ರಾಕೇಶ್ ಹೆಗ್ಡೆ ಬಳಂಜ, ನಿಕಟಪೂರ್ವ ಕಾರ್ಯದರ್ಶಿ ಗುರುಪ್ರಕಾಶ್ ಭಟ್, ಜೊತೆ ಕಾರ್ಯದರ್ಶಿ ಶಂಕರ್ ರಾವ್, ನಿಕಟ ಪೂರ್ವ ಜೊತೆ ಕಾರ್ಯದರ್ಶಿ, ಇಮ್ರಾನ್ ಬೆಳ್ತಂಗಡಿ ವಿದ್ವತ್ ಎಜುಕೇಶನ್ ಫೌಂಡೇಶನ್ ನ ಕೋಶಾಧಿಕಾರಿ ಕಾಶೀನಾಥ್. ಕೆ, ಹಾಗೂ ಕಾರ್ಯದರ್ಶಿ ಪ್ರಜ್ವಲ್ ರೈ ಇವರು ಉಪಸ್ಥಿತರಿದ್ದರು.

ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜ. 4 ರಂದು ರಾತ್ರಿ ಗಂಟೆ 7.30 ಕ್ಕೆ ಪ್ರಾರಂಭಗೊಳ್ಳಲಿದ್ದು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಯಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ.ಕ್ರೀಡಾಂಗಣದ ಉದ್ಘಾಟನೆಯನ್ನು ತಹಶೀಲ್ದಾರರು
ಪೃಥ್ವಿ ಸಾನಿಕಂ ನಡೆಸಲಿರುವರು ಎಂದು ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಯಶವಂತ್ ಗೌಡ ಬೆಳಾಲು ಇವರು ಪ್ರಕಟಣೆಯಲ್ಲಿ ತಿಳಿಸಿದರು.

ವಿದ್ವತ್ ಎಜುಕೇಶನ್ ಫೌಂಡೇಶನ್ ನ ಕೋಶಾಧಿಕಾರಿಯಾದ ಕಾಶೀನಾಥ್. ಕೆ ರವರು ಮಾತನಾಡಿ ತಾಲೂಕಿನ ಹಲವಾರು ಪ್ರತಿಷ್ಠಿತ ತಂಡಗಳು ಹಾಗೂ ಮಹಿಳೆಯರ ಆಹ್ವಾನಿತ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ಶಂಕರ್ ರಾವ್ ರವರು ಮಾತನಾಡಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುಖ್ಯ ಅಥಿತಿಗಳ ಬಗ್ಗೆ ಮಾಹಿತಿ ನೀಡಿ, ವಂದಿಸಿದರು.

Related posts

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ಮುಂಡಾಜೆ ಕಾಲೇಜು: ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ

Suddi Udaya

ಬಾಸ್ಕೆಟ್‌ಬಾಲ್ ಪಂದ್ಯಾಟ: ಉಜಿರೆ ಎಸ್‌ಡಿಎಂ ಕಾಲೇಜು ಪುರುಷ ಮತ್ತು ಮಹಿಳೆಯರ ವಿಭಾಗಕ್ಕೆ ಪ್ರಶಸ್ತಿ

Suddi Udaya

ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಸಿಗ್ಮಾ ಅಸೋಸಿಯೇಷನ್ ಉದ್ಘಾಟನೆ

Suddi Udaya

ಕಳಿಯ ಗ್ರಾ.ಪಂ. ನಲ್ಲಿ ಹುಚ್ಚು ನಾಯಿ ಉಚಿತ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ- 2023’ ಸಮಾರೋಪ ಸಮಾರಂಭ

Suddi Udaya
error: Content is protected !!