ಗೋಪಾಲ ಕಾಶಿಪಟ್ಣ,
ಪ್ರಶಾಂತ್ ಕಲ್ಲಾಪು
ಬೆಳ್ತಂಗಡಿ: ನಲಿಕೆಯವರ ಸಮಾಜ ಸೇವಾ ಸಂಘ ರಿ. ಬೆಳ್ತಂಗಡಿ, ಇದರ ನೂತನ ದೈವಾರಾದನ ಸಮಿತಿಯ ಆಯ್ಕೆಯನ್ನು ತಾಲೂಕು ಸಮಿತಿಯ ಅಧ್ಯಕ್ಷರಾದ ಎಸ್. ಪ್ರಭಾಕರ , ಮಾಜಿ ಅಧ್ಯಕ್ಷ ರಾದ ಸೇಸಪ್ಪ ನಲಿಕೆಹಾಗೂ ಸಮಿತಿ ಸದಸ್ಯರುಗಳ ಸಮ್ಮುಖದಲ್ಲಿ ಡಿ.29ರಂದು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಗೋಪಾಲ ಕಾಶಿಪಟ್ಣ, ಕಾರ್ಯದರ್ಶಿ ಯಾಗಿ ಪ್ರಶಾಂತ್ ಕಲ್ಲಾಪು, ಉಪಾಧ್ಯಕ್ಷರಾಗಿ ಕಾಂತಪ್ಪ ಪೆರಿಂಜೆ , ಧರ್ಣಪ್ಪ ಅರುವ, ಲಕ್ಷ್ಮಣ ಜೈನಪೇಟೆ, ಗೌರವ ಸಲಹೆಗಾರರಾಗಿ ರಮೇಶ್ ಪೆರಿಂಜೆ, ಜೊತೆಕಾರ್ಯದರ್ಶಿ ಯಾಗಿ ಶ್ರೀನಿವಾಸ ಮುಂಗೆಲು, ಸಮಿತಿಯ ಸದಸ್ಯರುಗಳಾಗಿ, ಸುರೇಶ್ ಕುಕ್ಕೊಟ್ಟು, ಚಂದಪ್ಪ ಕುಕ್ಕೊಟ್ಟು, ಸುರೇಶ್ ಮುಂಗೆಲು , ಯೋಗೀಶ್ ಧರ್ಮಸ್ಥಳ, ಪ್ರಶಾಂತ ಮುಂಗೆಲು , ರಮೇಶ್ ಕುಕ್ಕೊಟ್ಟು ಶ್ರೀಧರ ಕಾಶಿಪಟ್ಣ , ಗೋಪಾಲ ಅರುವ ,ರಾಜೇಶ್ ಪ್ರಶಾಂತ್ , ಶೇಖರ ಬಂಗಾಡಿ , ಧರ್ಣಪ್ಪ , ಇವರುಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯ ಉಪಾಧ್ಯಕ್ಷರಾದ ರಾಮು ಶಿಶಿಲ, ಸದಸ್ಯರಾದ ವಿಜಯ್ ಮುಂಡಾಜೆ, ವಿನಯ ಕೊಯ್ಯುರ್, ಜಗದೀಶ ಓಡಿಲ್ನಾಳ ಓಬಯ್ಯ ಧರ್ಮಸ್ಥಳ,ಹಾಗೂ ಸಮಾಜ ಬಾಂಧವರು ಹಾಜರಿದ್ದರು, ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಪ ವೇಣೂರು ಸ್ವಾಗತಿಸಿ, ಹಾಗೂ ಧನ್ಯವಾದವಿತ್ತರು.