ಬಂದಾರು : ಡಿ 29 ಬಂದಾರು ಗ್ರಾಮ ಓಟೆಚ್ಚಾರು ಪರಿಸರದಲ್ಲಿ ನಿನ್ನೆ ರಾತ್ರಿ ಒಂಟಿ ಸಲಗದ ದಾಳಿ ನಡೆಸಿ ಕೃಷಿ, ಸೊತ್ತುಗಳನ್ನು ನಾಶ ಪಡಿಸಿದೆ.
ಓಟೆಚ್ಚಾರು ಪರಿಸರದ ನಿವಾಸಿಗಳಾದ ಉಮರಬ್ಬ ಮತ್ತು ಅಬ್ದುಲ್ ರಝಾಕ್ ರವರ ಅಡಿಕೆ ಗಿಡ, ಪೈಪ್ ಲೈನ್ ಹಾನಿಮಾಡಿದ್ದೂ ನೀರಿನ ಬ್ಯಾರೆಲ್ ಅಪ್ಪಚ್ಚಿ ಮಾಡಿದ್ದೂ, ರಸ್ತೆ ಬದಿಯಲ್ಲಿದ್ದ ಮರವನ್ನು ಮಗುಚಿ ನಜ್ಜು
ಗುಜ್ಜು ಮಾಡಿದ್ದೂ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಆನೆ ದಾಳಿ ನಿರಂತರವಾಗಿ ನಡೀತಾ ಇದೆ ಕೃಷಿಕರಿಗೆ ಆತಂಕ ಹೆಚ್ಚಾಗಿದೆ.
ಅರಣ್ಯ ಇಲಾಖೆ, ಸರ್ಕಾರ ಇದರ ಬಗ್ಗೆ ಯಾಕೆ ಸಮರ್ಪಕವಾದ ಪರಿಹಾರ ನೀಡುತ್ತಿಲ್ಲ ಅನ್ನೋದು ಆನೆದಾಳಿಯಿಂದ ಹಾನಿಗಿಡಾದ ನೊಂದ ಕೃಷಿಕರ ಅಳಲು ವ್ಯಕ್ತವಾಗ್ತಾ ಇದೆ. ಕೂಡಲೇ ಇದರ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.