September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಉಜಿರೆ: ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಳಿ ಜಂಟಿ ಆಶ್ರಯದಲ್ಲಿ ಪ್ರತಿಭಾ ಸಂಗಮ

ಉಜಿರೆ: ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ೨೮ನೇ ವರ್ಷದ ಪ್ರತಿಭಾ ಸಂಗಮವು ಡಿ.28ರಂದು ಅರಳಿಯ ರಂಗಮಂದಿರದಲ್ಲಿ ನಡೆಯಿತು.

ಕಡಬ ಬ್ಯಾಂಕ್ ಆಫ್ ಬರೋಡದ ಶಿವಪ್ರಸಾದ್ ಸುರ್ಯ ಇವರು ಸಭೆಯನ್ನು ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು ಮಿತ್ರ ಯುವಕ ಮಂಡಲದ ಅಧ್ಯಕ್ಷ ಚರಣ್ ಕುಮಾರ್ ಪಿ. ವಹಿಸಿದ್ದರು.

ಆರ್ಯಭಟ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ್ ಕುಮಾರ್ ಲಾಯಿಲ ರವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಬಹುಮಾನ ನೀಡಿ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಊರಿನ ಪ್ರತಿಭೆಗಳನ್ನು ವೇದಿಕೆಯಲ್ಲಿ ಗುರುತಿಸಲಾಯಿತು.

ವೇದಿಕೆಯಲ್ಲಿ ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ದಯಾಮಣಿ ರವೀಂದ್ರನಾಥ್ ಮತ್ತು ಯುವ ಸಂಕೀರ್ಣದ ಅಧ್ಯಕ್ಷ ಲಕ್ಷ್ಮಣ್ ಜಿ.ಎಸ್. ಎಳಚಿತ್ತಾಯನಗರ, ಮಿತ್ರ ಮಹಿಳಾ ಮಂಡಲದ ಅಧ್ಯಕ್ಷ ವತ್ಸಲಾ ಸಂತೋಷ್ ಗೌಡ ಉಪಸ್ಥಿತರಿದ್ದರು.

ವಿಜಯ್ ಕುಮಾರ್ ಕೊಡಿಯಲ್‌ಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತು.
ಚೇತನ್ ಬಂಗೇರ ಸ್ವಾಗತಿಸಿ, ನಿಶಿತ್ ಬಂಗೇರ ಕಾರ್ಯಕ್ರಮ ನಿರೂಪಿಸಿ ಪಮಿತಾ ವಂದಿಸಿದರು.

Related posts

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಗಣೇಶ್ ಗೌಡ ನೆಲ್ಲಿಪಲ್ಕೆ ಬೆಂಬಲ

Suddi Udaya

ಧರ್ಮಸ್ಥಳ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಸ್ಕಾರ್ಫ್ ಡೇ, ಕಾರ್ಗಿಲ್ ದಿನಾಚರಣೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

Suddi Udaya

ಮಡವು ಸ್ವರ್ಣ ಸಂಜೀವಿನಿ ಟ್ರಸ್ಟ್ ವತಿಯಿಂದ ಕಳೆಂಜದ ನಂದಗೋಕುಲ ಗೋಶಾಲೆಯಲ್ಲಿ ಗೋಪೂಜೆ ಮತ್ತು ಗೊಗ್ರಾಸಕ್ಕೆ ನಗದು ಹಸ್ತಾಂತರ

Suddi Udaya

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ – ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya
error: Content is protected !!