24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್‌ಡಿಎಂ ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ: 25 ವರ್ಷಗಳ ಹಿಂದೆ ಕಲಿತ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಮಾವೇಶ

ಉಜಿರೆ: 1996-1999ರ ಅವಧಿಯಲ್ಲಿ ಉಜಿರೆ ಎಸ್‌ಡಿಎಂ ಸೆಕೆಂಡರಿ ಶಾಲೆ ಮತ್ತು ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ ಪ್ರೌಢಶಿಕ್ಷಣ ಪೂರೈಸಿದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದ ಸಮಾವೇಶ ಹಾಗೂ ‘ಗುರುವಂದನ’ ಕಾರ್ಯಕ್ರಮ ಡಿ.28ರಂದು ಶಾಲೆಯ ಸಭಾಭವನದಲ್ಲಿ ನಡೆಯಿತು.

ಶಾಲಾ ಮುಖ್ಯಶಿಕ್ಷಕ ಸುರೇಶ್ ಕೆ. ಸಮಾರಂಭವನ್ನು ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿಗಳಾದ ಮಂಜ ನಾಯ್ಕ,

ಅಂತರರಾಷ್ಟ್ರೀಯ ಚಿತ್ರಕಲಾವಿದ ಉಜಿರೆಯ ವಿಲಾಸ್ ಆರ್. ನಾಯಕ್, ಪವಿತ್ರ ಶೆಣೈ ವಿದ್ಯಾರ್ಥಿಗಳಾಗಿದ್ದ ಸಂದರ್ಭದ ಜೀವನದ ಕುರಿತು ಮಾತನಾಡಿದರು.

ಹಿರಿಯ ಶಿಕ್ಷಕ ಶಂಕರ ನಾರಾಯಣ ರಾವ್, ಬಿ. ಜನಾರ್ದನ ತೋಳ್ಪಾಡಿತ್ತಾಯ , ಮೋಹನ ಎಸ್.ಜೈನ್, ಸದಾಶಿವ ಪೂಜಾರಿ, ಕಲಾವತಿ ಸಿ.ಎಚ್., ಆರ್.ಎನ್. ಪೂವಣಿ, ಎನ್. ಪದ್ಮರಾಜು, ರಮೇಶ ಮಯ್ಯ, ವಿ.ಕೆ. ವಿಟ್ಲ, ಕೃಷ್ಣ ಶೆಟ್ಟಿ ಮಾತನಾಡಿದರು.
ಶಿಕ್ಷಕರಿಗೆ ಗುರುನಮನ ಸಲ್ಲಿಸಲಾಯಿತು. ವಿಲಾಸ್ ಆರ್. ನಾಯಕ್ ಅವರನ್ನು ಗೌರವಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕರು ಅಂದು ಮಕ್ಕಳನ್ನು ಶಿಕ್ಷಿಸಿ, ತಿದ್ದಿ, ತೀಡಿ, ಜೀವನದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದ್ದು ನಮ್ಮಿಂದಾದ ಸಣ್ಣ ಪುಟ್ಟ ನೋವುಗಳನ್ನು ಮನಸ್ಸಿನಲ್ಲಿಟ್ಟು ಕೊಳ್ಳದೇ ಈ ಅದ್ಭುತ ಕ್ಷಣವನ್ನು ಸೃಷ್ಟಿಸಿದ್ದೀರಿ. ಒಂದೇ ವೇದಿಕೆಯಲ್ಲಿ ದಶಕಗಳ ನಂತರ ಎಲ್ಲಾ ನಿವೃತ್ತ ಅಧ್ಯಾಪಕರುಗಳನ್ನು ಒಗ್ಗೂಡಿಸಿರುವುದು ಅವಿಸ್ಮರಣೀಯವಾಗಿದೆ. ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನಕ್ಕೆ ಸೀಮಿತವಾಗದೆ, ಶಿಕ್ಷಕ ವೃಂದದವರ ಸಮ್ಮೀಲನವಾಗಿದೆ. ಜೀವನ ಮೌಲ್ಯಗಳನ್ನು ತರಗತಿಯ ಕೊಣೆಗಳಲ್ಲಿ ಭೋದಿಸಬೇಕಾದ ಈ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದ್ದು, ಕಾರ್ಯಕ್ರಮದ ಉದ್ದೇಶ, ಚಿಂತನೆ, ಒಗ್ಗೂಡುವಿಕೆ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹರಸಿ ಹಾರೈಸಿದರು.

ವಿಲಾಸ್ ಆರ್. ನಾಯಕ್ ರವರು ತಮ್ಮ ಪ್ರೌಢಶಿಕ್ಷಣದ ಹಂತದಲ್ಲಿ ತಾನು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದು ಗುರುವೃಂದದವರ ಬೆಂಬಲದಿಂದ ಹಂತಹಂತವಾಗಿ ಬೆಳೆದು ಬಂದ ವಿಚಾರಗಳನ್ನು ಮೆಲುಕುಹಾಕಿದರು.

ಡಾ. ವಿಶ್ವಮೋಹನ್ ಕೆ.ಎನ್, ಡಾ. ವೆಂಕಟೇಶ್ ಕೆ.ಟಿ. ಮತ್ತು ಶ್ರೀಮತಿ ಸೌಮ್ಯ ಕುಮಾರಿ ಇವರು ಶಿಕ್ಷಕರ ಜೀವನಚರಿತ್ರೆಯ ಸಂಕ್ಷಿಪ್ತ ಮಾಹಿತಿಯನ್ನು ಹಂಚಿಕೊಂಡರು.

ಶ್ರೀಮತಿ ಪುನೀತಾ ಪ್ರಭಾಕರ್ ಸ್ವಾಗತಿಸಿದರು. ಶ್ರೀಮತಿ ಶ್ವೇತಾ ಪೈ ವಂದಿಸಿದರು. ಶ್ರೀಮತಿ ಗಾಯತ್ರಿ ಪಿ. ಕಾರ್ಯಕ್ರಮ ನಿರೂಪಿಸಿದರು.
ವರದಿ: ಶ್ರೀಮತಿ ಸೌಮ್ಯ ಕುಮಾರಿ.

Related posts

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್ ಚೈರ್ ವಿತರಣೆ

Suddi Udaya

ಕೊಕ್ಕಡ: ಇತ್ತೀಚೆಗೆ ನಿಧನರಾದ ತಿಮ್ಮಪ್ಪ ಗೌಡ ರವರ ಸವಿ ನೆನಪಿಗಾಗಿ ಪುತ್ರ ಗಣೇಶ್ ಗೌಡ ಕಲಾಯಿಯವರಿಂದ 800 ಹಣ್ಣಿನ ಗಿಡ ವಿತರಣೆ

Suddi Udaya

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya

ಧರ್ಮಸ್ಥಳ: ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ

Suddi Udaya

ಮತ ಚಲಾಯಿಸಿದ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಹಿಲನ್

Suddi Udaya

ಉಜಿರೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!