ಶಾಲಾ ಕಾಲೇಜು

ಕರ್ನೋಡಿ ಸ.ಉ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಖೋ ಖೋ ಪಂದ್ಯಾಟ

ಲಾಯಿಲ: ಕರ್ನೋಡಿ ಸ.ಉ.ಪ್ರಾ. ಶಾಲೆಯಲ್ಲಿ ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಖೋ ಖೋ ಪಂದ್ಯಾಟವು ಆ.22ರಂದು ನಡೆಯಿತು.ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅವರು ದೀಪ ಪ್ರಜ್ವಲಿಸಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಜಯ, ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಸುರೇಶ್ ಶೆಟ್ಟಿ ಲಾಯಿಲ, ತಾಲೂಕು ದೈ. ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ವಲಯ ಕ್ರೀಡಾ ಸಂಯೋಜಕ ಅಖಿಲ್ ಕುಮಾರ್, CRP ವಾರಿಜಾ ಹಾಗೂ ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ್ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಗಂಗಾರಾಣಿ ನಿರೂಪಿಸಿ, ಮುಖ್ಯ ಶಿಕ್ಷಕ ಜಗನ್ನಾಥ್ ಎಂ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ತ್ರಿಶಾಲ ರವರು ಧನ್ಯವಾದವಿತ್ತರು.

ಖೋ ಖೋ ಪಂದ್ಯಾಟದ ಸಮಾರೋಪ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ವಹಿಸಿದ್ದರು.ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರೂ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್ ಆರ್, ಕ್ರೀಡಾ ವಲಯ ಸಂಯೋಜಕ ಅಖಿಲ್ ಕುಮಾರ್, SDMC ಅಧ್ಯಕ್ಷೆ ಸೌಮ್ಯ, ಮುಖ್ಯ ಶಿಕ್ಷಕ ಜಗನ್ನಾಥ ಎಂ, ದೈ. ಶಿ. ಶಿಕ್ಷಕಿ ತ್ರಿಶಾಲರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಹಾಗೂ ಬಂಗಾಡಿ ವಲಯದ ಹಲವು ಶಾಲೆಗಳು ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸ. ಹಿ ಪ್ರಾ ಶಾಲೆ ಕೊಯ್ಯೂರು ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಸ.ಉ ಪ್ರಾ ಶಾಲೆ ಕೊಯ್ಯೂರು ಪ್ರಥಮ ಸ್ಥಾನವನ್ನು ಪಡೆದು, ದ್ವಿತೀಯ ಸ್ಥಾನವನ್ನು ಸ.ಉ ಪ್ರಾ. ಶಾಲೆ ಕರ್ನೋಡಿ ಗಳಿಸಿತು. ಈ ಸಂದರ್ಭದಲ್ಲಿ ಶಾಲೆಗಳ ಪೋಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.

ಶಿಕ್ಷಣ ಇಲಾಖೆ, ಸ.ಉ.ಪ್ರಾ. ಶಾಲೆ ಕರ್ನೋಡಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಶಿಕ್ಷಕ ಕೃಷ್ಣಕುಮಾರ್ ನಿರೂಪಿಸಿ, ಶಿಕ್ಷಕಿಯರಾದ ಮಮತಾ ಕೆ ಸ್ವಾಗತಿಸಿ, ಉಷಾ ಕೆ ಧನ್ಯವಾದವಿತ್ತರು.

Related posts

ಎಸ್.ಡಿ.ಎಂ ಕಾಲೇಜಿನ ತಾಂತ್ರಿಕ ವಿದ್ಯಾಲಯದ ಗ್ರಂಥಪಾಲಕಿ ಡಾ. ರಜತಾ ಪಿ ಶೆಟ್ಟಿ ಪ್ರಬಂಧಕ್ಕೆ ಅಂತರಾಷ್ಟ ಮಟ್ಟದ ಅತ್ಯುತ್ತಮ ಪ್ರಬಂಧ ಪ್ರಶಸ್ತಿ

Suddi Udaya

ಬಜಿರೆ ಪಿಎಂಶ್ರೀ ಸ.ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾನ್ಯತೆ

Suddi Udaya

ನ್ಯಾಯತರ್ಪು: ರಕ್ತೇಶ್ವರಿಪದವು ಸ.ಕಿ.ಪ್ರಾ. ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya
error: Content is protected !!