ಬೆಳ್ತಂಗಡಿ:ಮಾಜಿ ಶಾಸಕರಾದ ಕೆ ವಸಂತ ಬಂಗೇರರವರ 78 ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಬಂಗೇರಾ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ವಸಂತ ಬಂಗೇರರ ಅಭಿಮಾನಿಗಳು, ಹಿತೈಷಿಗಳ ಸಮಾಲೋಚನೆ ಸಭೆಯು ಡಿ.29 ರಂದು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಬೆಳ್ತಂಗಡಿಯ ಅಭಿವೃದ್ದಿಯ ಹರಿಕಾರ ಮಾಜಿ ಶಾಸಕ ದಿ.ವಸಂತ ಬಂಗೇರರ ಹುಟ್ಟೂರಾದ ಕುವೆಟ್ಟು ಗ್ರಾಮದ ಮದ್ದಡ್ಕ ಬಂಡೀಮಠ ಮೈದಾನದಲ್ಲಿ ಜ.15 ರಂದು ಬುಧವಾರ ಹೊನಲು ಬೆಳೆಕಿನ ಮುಕ್ತ ಕಬಡ್ಡಿ ಪಂದ್ಯಕೂಟವನ್ನು ಬಂಗೇರಾ ಬ್ರಿಗೇಡ್ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರರ ನೇತೃತ್ವದಲ್ಲಿ ಏರ್ಪಡಿಸುವುದಾಗಿ ತೀರ್ಮಾನಿಸಲಾಯಿತು.
ಕಬಡ್ಡಿ ಆಟಗಾರರಿಗೆ ಹಾಗೂ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಪಂದ್ಯಾಕೂಟದ ಉದ್ಘಾಟನೆಗೆ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ರವರನ್ನು ಹಾಗು ವಿವಿಧ ಕ್ಷೇತ್ರದ ಇನ್ನಿತರ ಅನೇಕ ಗಣ್ಯಾತಿಗಣ್ಯ ರುಗಳನ್ನು ಆಹ್ವಾನ ನೀಡಲಾಗುವುದು.
ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಬಂಗೇರಾ ಬ್ರಿಗೇಡ್ ಅಧ್ಯಕ್ಷರಾದ ಶ್ರೀಮತಿ ಬಿನುತಾ ಬಂಗೇರಾ ವಹಿಸಿದ್ದರು.
ಸಭೆಯಲ್ಲಿ ನಾಮದೇವ್ ರಾವ್ ಮುಂಡಾಜೆ,ಬಿ.ಕೆ ವಸಂತ,ವೃಷಭ ಆರಿಗ, ಜಯಾನಂದ,ಹರಿದಾಸ್ ಕೇದೆ,ಚಂದ್ರಹಾಸ ಕೇದೆ, ಯಶವಂತ ಆರ್.ಬಾಳಿಗ,ಬಾಲಕೃಷ್ಣ ರಾವ್,ಸಮದ್ ಕುಂಡಡ್ಕ,ಸುಮತಿ ಪ್ರಮೋದ್,ವಿಜಯಲಕ್ಷ್ಮಿ,ಮ್ಯಾಥ್ಯೂ ವರ್ಗೀಸ್, ಥೋಮಸ್, ಎಂ.ಎಂ.ಚೈತ್ರ, ಶೀನಿವಾಸ ಕೆ.ಉಜಿರೆ, ಎಸ್.ಪ್ರಭಾಕರ ಓಡೀಲ್ನಾಳ,ಇಸ್ಮಾಯಿಲ್ ನಾವುರಾ,ಇ. ಸಂದೀಪ್ ಕುಮಾರ್,ಸಫ್ವಾನ್, ರಿಯಾಜ್ ಕುವೆಟ್ಟು,ಸಿರಾಜ್ ಚಿಲಿಂಬಿ,ರವೀಂದ್ರ ಬಿ.ಅಮೀನ್, ರವಿರಾಮ ಶೆಟ್ಟಿ, ನೌಷಾದ್ ನಾವುರಾ,ರಾಕೇಶ್ ಕುಮಾರ್,ರಾಘವೇಂದ್ರ ಮೇಲಂತಬೆಟ್ಟು,ಸೌಮ್ಯ ಲಾಯಿಲ, ಅನೂಪ್ ಎಂ.ಬಂಗೇರಾ, ರಾಜು ಪೂಜಾರಿ,ಸತೀಶ್ ಬಂಗೇರಾ,ಶೇಖರ್ ಗೌಡಾ,ಶರತ್ ,ಜಯಕುಮಾರ್ ನಡ ಭಾಗವಹಿಸಿದ್ದರು.
ಕೆ.ಸಲೀಂ ಸ್ವಾಗತಿಸಿ, ವಂದಿಸಿದರು.