ಹೊಸಂಗಡಿ: ಭೀಮ್ ಆರ್ಮಿ ಸಂಘಟನೆ ಇದರ ಉದ್ಘಾಟನಾ ಸಮಾರಂಭವು ಪೆರಿಂಜೆ ಪಜಂಬಾಡಿ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರಗಿತು.
ಬೆಳ್ತಂಗಡಿ ತಾಲೂಕು ದಲಿತ ಮುಖಂಡ, ಉದ್ಯಮಿ ಲಕ್ಷ್ಮಣ್.ಜಿ.ಎಸ್. ಭೀಮ್ ಆರ್ಮಿ ಸಂಘಟನೆಯನ್ನು ಡಾ. ಬಿ. ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯರು, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂ. ವಾದ)ಬೆಳ್ತಂಗಡಿ ತಾಲೂಕು ಸಮಿತಿ ಮುಖಂಡರು ಡಿ. ಓಬಯ್ಯಾ ವಿವಿಧ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸುರೇಶ್. ಎಚ್. ಆರಂಬೋಡಿ, ಹಿರಿಯರಾದ ಸಿಂಗ ಮಲಯಾಳಪಲ್ಕೆ, ಬೂಬ ಬಡಕೋಡಿ, ರಮೇಶ್ ಪೇರಿ, ಭೀಮ್ ಆರ್ಮಿ ಹೊಸಂಗಡಿ ಇದರ ಅಧ್ಯಕ್ಷ ಗುರುಪ್ರಸಾದ್ ಪೆರಿಂಜೆ, ಕಾರ್ಯದರ್ಶಿ ಶರತ್, ಗೌರವ ಅಧ್ಯಕ್ಷ ರಘುನಾಥ, ಸಂಘಟನಾ ಪ್ರಧಾನ ಕಾರ್ಯದರ್ಶಿ ಸುನೀಲ್ ಪಜಂಬಾಡಿ,ಹಾಗೂ ವಿವಿಧ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಪ್ರವೀಣ್ ಸೂರ್ಯ ಹೊಸಂಗಡಿ ಸ್ವಾಗತಿಸಿ, ವಂದಿಸಿದರು.