ಬೆಳಾಲು: ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 12 ಸ್ಥಾನಗಳಿಗೆ ಡಿ.29ರಂದು ಚುನಾವಣೆಯಲ್ಲಿ 6 ಮಂದಿ ನಿರ್ದೇಶಕರು ಆವಿರೋಧವಾಗಿ ಆಯ್ಕೆಯಾದರೆ, ಉಳಿದ 6 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಹೆಚ್. ಪದ್ಮಗೌಡ ಅವರ ನೇತೃತ್ವದ ತಂಡ ಜಯಭೇರಿ ಬಾರಿಸಿದ್ದಾರೆ.
ಡಿ.29ರಂದು ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ಹೆಚ್. ಪದ್ಮ ಗೌಡ ಹೆಚ್. (840 ಮತ ), ರಾಜಪ್ಪ ಗೌಡ ಯಾನೆ ಸೀತಾರಾಮ ಗೌಡ(800 ಮತ ), ದಾಮೋದರ ಗೌಡ ಸುರುಳಿ (793 ಮತ), ರಮೇಶ ಗೌಡ(785 ಮತ ), ಸುರೇಂದ್ರ(784 ಮತ), ಪ್ರವೀಣ್ ವಿಜಯ್(781 ಮತ ) ಮತಗಳನ್ನು ಪಡೆದು ಜಯಭೇರಿ ಭಾರಿಸಿದ್ದಾರೆ.
ಅವಿರೋಧವಾಗಿ ಆಯ್ಕೆ: ಇನ್ನು ಉಳಿದಂತೆ ಪ.ಜಾತಿ ಕ್ಷೇತ್ರದಿಂದ ಚೀಂಕ್ರ, ಪ.ಪಂಗಡ ಕ್ಷೇತ್ರದಿಂದ ಸೀತಾರಾಮ ಬಿ.ಎಸ್., ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ದಿನೇಶ್ ಎ., ಹಿಂದುಳಿದ ಬಿ ಪ್ರವರ್ಗ ಕ್ಷೇತ್ರದಿಂದ ಶೀನಪ್ಪ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಸುಕನ್ಯ ಮತ್ತು ಹೇಮಾವತಿ ಇವರುಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಪ್ರಕ್ರಿಯೆಯನ್ನು ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ. ಪ್ರತಿಮಾ ನಡೆಸಿಕೊಟ್ಟರು.