September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಿಲಾತಬೆಟ್ಟುನಲ್ಲಿ ಧರ್ಮಸ್ಥಳ ಪೊಲೀಸ್ ಇಲಾಖೆಯ ಬೊಲೆರೋ ಜೀಪ್‌ ಗೆ ಡಿಕ್ಕಿ ಹೊಡೆದ ಸ್ಕೂಟಿ

ಬೆಳ್ತಂಗಡಿ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ತಿರುವಿನಲ್ಲಿ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಧರ್ಮಸ್ಥಳ ಪೊಲೀಸ್ ಇಲಾಖಾ ಬೊಲೆರೋ ಜೀಪ್‌ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಧರ್ಮಸ್ಥಳ ಪೊಲೀಸ್‌ ಠಾಣಾ ಪಿಎಸ್‌ ಐ ರವರು ಮಂಗಳೂರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಇಲಾಖಾ ಬೊಲೆರೋ ಜೀಪ್‌ನಲ್ಲಿ ಚಾಲಕ ರೊಂದಿಗೆ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಬೆಳಗ್ಗೆ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ನಿವಾಸಿ ಆಕ್ಟಿವಾ ಹೋಂಡಾ ಸವಾರ ಹರ್ಷಿತ್‌ ಎಂಬವರು ಬಿಸಿರೋಡ್‌ ಕಡೆಯಿಂದ ಪುಂಜಾಲಕಟ್ಟೆ ಕಡೆಗೆ ತನ್ನ ಆಕ್ಟಿವಾ ಹೋಂಡಾ ವನ್ನು ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಕಟ್ಟೆಮನೆ ರಾಷ್ಟ್ರೀಯ ಹೆದ್ದಾರಿ -73 ರಲ್ಲಿ ತಿರುವಿನಲ್ಲಿ ಸವಾರನ ನಿಯಂತ್ರಣ ತಪ್ಪಿ ಇಲಾಖಾ ಬೊಲೆರೋ ಜೀಪ್‌ ಗೆ ಡಿಕ್ಕಿ ಹೊಡೆದು ಆಕ್ಟಿವಾ ಹೋಂಡಾ ಸಮೇತ ರಸ್ತೆಗೆ ಬಿದ್ದು ತಲೆಗೆ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್‌ ನಲ್ಲಿ ಮಂಗಳೂರು ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ.


ಈ ಬಗ್ಗೆ ಸ್ಕೂಟಿ ಸವಾರರ ಸಂಬಂಧಿಕರಿಂದ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Related posts

ಗುರುವಾಯನಕೆರೆ ಬಂಟರ ಭವನದಲ್ಲಿ ನಡೆದ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ: ಕಾಪಿನಡ್ಕ ಸ ಕಿ ಪ್ರಾ ಶಾಲೆಗೆ ಕಂಪ್ಯೂಟರ್ ಉಪಕರಣಗಳ ಹಸ್ತಾಂತರ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

Suddi Udaya

ಬೆಳ್ತಂಗಡಿ: ಮಹಿಳಾ ವೃಂದ ನೂತನ ಕಟ್ಟಡ ಉದ್ಘಾಟನೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

Suddi Udaya
error: Content is protected !!