April 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಸಂಘ-ಸಂಸ್ಥೆಗಳು

ಶಿಶಿಲ: ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಸಮಾರೋಪ

ಶಿಶಿಲ: ಸೇವಾಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರ ಶಿಶಿಲ ಮತ್ತು ಗ್ರಾಮ ಪಂಚಾಯತ್ ಶಿಶಿಲ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ ೨೯ನೇ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಡಿ.೨೮ರಂದು ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲ ಕಟ್ಟಡ ವೈಕುಂಠಪುರದಲ್ಲಿ ನಡೆಯಿತು.

ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಇದರ ಅಧ್ಯಕ್ಷೆ ಶ್ರೀಮತಿ ಶಾಂತ ಪಿ. ಶೆಟ್ಟಿ ಶಿಶಿಲ ಜನರಿಗೆ ಸ್ವ ಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರುವುದು ಬಹಳ ಸಂತೋಷದ ವಿಷಯ ಎಂದು ಶುಭಹಾರೈಸಿದರು.

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಶ್ರೀಮತಿ ಸ್ವರ್ಣಗೌರಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ-ಉದ್ಯೋಗದ ಅವಕಾಶವಿರುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರರಾದ ಶ್ರೀಮತಿ ವಿನಯ ಶೆಂಡ್ಯೆ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಪರವಾಗಿ ಶ್ರೀಮತಿ ವಿನಯ ಶೆಂಡ್ಯೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶಿಶಿಲ ಶ್ರೀ ಚಾಮುಂಡೇಶ್ವರಿ ದೇವಿ ದೇವಸ್ಥಾನದ ಟ್ರಸ್ಟಿ ಶ್ರೀಮತಿ ಚಂದ್ರಾವತಿ, ಶಿಶಿಲ ದುರ್ಗಾಪರಮೇಶ್ವರಿ ಯುವಕ ಮಂಡಲ ವೈಕುಂಠಪುರದ ಮಾಜಿ ಅಧ್ಯಕ್ಷ ಚೆನ್ನಪ್ಪ ಕೆ.ಎಂ. ಉಪಸ್ಥಿತರಿದ್ದರು. ಒಟ್ಟು ೨೫ ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಮೇ 1: ದೇಲಂಪುರಿ ಕ್ಷೇತ್ರದಲ್ಲಿ ಮಳೆಗಾಗಿ ದೇವರಿಗೆ ಸೀಯಾಳ ಅಭಿಷೇಕ

Suddi Udaya

ಎಸ್ ಡಿ ಎಂ ಪಾಲಿಟೆಕ್ನಿಕ್ ನಲ್ಲಿ ಪ್ರೌಢ ಶಾಲಾ ಶಿಕ್ಷಕರಿಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆಯ ಕುರಿತು ಕಾರ್ಯಾಗಾರ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ

Suddi Udaya

ಬಿ.ಜೆ.ಪಿ ಅಭ್ಯರ್ಥಿ ಭಾರೀ ಮುನ್ನಡೆಯಿಂದ ಗೆಲುವಿನ ಜಯಭೇರಿ ಭಾರಿಸಲಿದ್ದಾರೆ, ಬಿಜೆಪಿ 400ರ ಗಡಿ ದಾಟಲಿದೆ-ಪ್ರಭಾಕರ ಬಂಗೇರ ಪತ್ರಿಕಾಗೋಷ್ಠಿ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಷ್ಠಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನ

Suddi Udaya
error: Content is protected !!